ಧೈರ್ಯದಿಂದ ಇರಿ,ನಿಮಗೆ ಗೌರವ ಸಿಗುತ್ತೆ ಎಂದು ಖರ್ಗೆ ಹೇಳಿದ್ದಾರೆ: ಜಗದೀಶ್‌ ಶೆಟ್ಟರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆ ಕುರಿತು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮಾತನಾಡಿದ್ದಾರೆ

ಜಗದೀಶ್ ಶೆಟ್ಟರನ್ನು ಟಾರ್ಗೆಟ್ ಮಾಡಿದ್ರು. ಪಾರ್ಟಿ ಬಿಟ್ಟು ಬಹಳ ಜನ ಹೋಗಿದ್ದಾರೆ. ಜಗದೀಶ್ ಶೆಟ್ಟರ್ ಒಬ್ಬರೇ ಟಾರ್ಗೆಟ್ ಯಾಕೆ? ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಹೇಳುತ್ತೇವೆಯೇ ಹೊರತು ವಿಪಕ್ಷದವರನ್ನು ಸೋಲಿಸಿ ಎಂದು ಹೇಳಲ್ಲ. ಇವರು ನನ್ನನ್ನು ಸೋಲಿಸಲು ಹೋಗಿ ಬಿಜೆಪಿಯನ್ನು ಸೋಲಿಸಿದರು ಎಂದು ಬಿಜೆಪಿ ಸೋಲಿನ ಕುರಿತು ಮಾತನಾಡಿದರು.

ಯಡಿಯೂರಪ್ಪ ಅವರಿಗೆ ಒತ್ತಡವಿತ್ತು. ಅದಕ್ಕಾಗಿ ಶೆಟ್ಟರನ್ನು ಸೋಲಿಸಿ ಎಂದು ಹೇಳಿದ್ರು. ಯಡಿಯೂರಪ್ಪ ಹಾಕಿದ ಕಣ್ಣೀರಿಂದ ಹಿಡಿದು, ಶೆಟ್ಟರ್ ಹೊರ ಬಂದಿದ್ದು ಸೇರಿದಂತೆ ಒಂದೊಂದೆ ಹಿನ್ನಡೆ ಆಯಿತು. ಯಾಕೆ ಎರಡು ವರ್ಷಕ್ಕೆ ಇಳಿಸಿದ್ರು ಯಡಿಯೂರಪ್ಪ ಅವರನ್ನು? ಅವರನ್ನು ಇಳಿಸಬೇಡಿ ಎಂದು ದೆಹಲಿಗೆ ಹೋಗಿ ಹೇಳಿ ಬಂದಿದ್ದೇವೆ ಎಂದರು.

ಕಾಂಗ್ರೆಸ್ ಹಿರಿಯ ‌ನಾಯಕರು ನನ್ನ ಜೊತೆ ಮಾತಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲರೂ ‌ಮಾತಾಡಿದ್ದಾರೆ. ನೀವು ಧೈರ್ಯದಿಂದ ಇರಿ, ಪಕ್ಷ ನಿಮ್ಮ ಜೊತೆ ಇರುತ್ತದೆ, ಗೌರವದಿಂದ ನಿಮ್ಮನ್ನು ನಡೆಸಿಕೊಳ್ಳುತ್ತೇವೆ. ನಿಮ್ಮಿಂದ ಪಕ್ಷಕ್ಕೆ ಲಾಭ ಆಗಿದೆ ಎಂದು ಹೇಳಿದ್ದಾರೆ. ಸಿಎಂ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ, ಇದಾದ ಮೇಲೆ ನನ್ನ ಜೊತೆ ಚರ್ಚೆ ಮಾಡಬಹುದು ಎಂದರು.

ಸಿಎಂ ಆಯ್ಕೆ ಪ್ರಕ್ರಿಯೆ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಹಿತದೃಷ್ಟಿಯಿಂದ ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳಿ ಎಂದು ಹೇಳಿದ್ದೇನೆ. ಅಧಿಕಾರದ ವ್ಯವಸ್ಥೆ ಯಾವ ಹಂತಕ್ಕೆ ಹೋಗಿದೆ ಎಂದು ಗೊತ್ತಿಲ್ಲ. ಬರಿ ಕಾಂಗ್ರೆಸ್ ಮಾತ್ರ ಅಲ್ಲ, ಪಾರ್ಟಿಯಲ್ಲೂ‌ ನಡೆದಿದೆ. ಕಾಂಗ್ರೆಸ್ ವರಿಷ್ಠರು ಹೈಕಮಾಂಡ್ ಏನು ನಿರ್ಧಾರ ಮಾಡ್ತಾರೋ ಅವರಿಗೆ ಬಿಟ್ಟ ವಿಚಾರ. ಆದರೆ ಸರಾಗವಾಗಿ ನಡೆಯುವ ಸರ್ಕಾರ ಆಗಬೇಕು. ಬಹುಮತ ಸರ್ಕಾರ ಬಂದಿದೆ, ಜನರಿಗೆ ಸಮಾಧಾನ ಆಗಿದೆ. ಅತಂತ್ರ ಬಂದು ಹೈಡ್ರಾಮಾ ನಡೆಯೋದು ಸ್ಟಾಪ್ ಆಗಿದೆ.ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್‌ ಇಬ್ಬರೂ ಅರ್ಹರಿದ್ದಾರೆ. ಪಾರ್ಟಿ ದೃಷ್ಟಿಯಿಂದ ಇಬ್ಬರೂ ಕುಳಿತು ಮಾತಾಡಿ ಅವರೇ ಒಂದು ನಿರ್ಧಾರ ಬರುವುದು ಒಳ್ಳೆಯದು. ಇದು ಪಾರ್ಟಿ ಹಾಗೂ ದೇಶಕ್ಕೆ ಒಳ್ಳೆಯದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!