ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಲಿಕಾಂ ಬಳಕೆದಾರರ ಗುರುತನ್ನು ರಕ್ಷಿಸಲು, KYC ಯೊಂದಿಗೆ ವಂಚನೆ ತಡೆಯಲು ಮತ್ತು ಅವರ ಕದ್ದ ಮೊಬೈಲ್ ಫೋನ್’ಗಳ ದುರುಪಯೋಗವನ್ನು ತಡೆಯಲು ಕೇಂದ್ರ ಸರಕಾರ ‘ಸಂಚಾರ್ ಸಾಥಿ’ (Sanchar Saathi) ಜಾಲತಾಣವನ್ನು ಲಾಂಚ್ ಮಾಡಿದೆ.
ಈ ಮೂಲಕ ಮೊಬೈಲ್ ಫೋನ್ ಸುರಕ್ಷತೆಗೆ ಮತ್ತೊಂದು ಹಂತವನ್ನು ಒದಗಿಸಿದಂತಾಗಿದೆ.
ಕೇಂದ್ರ ರೈಲ್ವೆ, ಸಂಹವನ ಮತ್ತು ಎಲೆಕ್ಟ್ರಾನಿಕ್ಸ್, ಐಟಿ ಸಚಿವ ಅಶ್ವಿನ್ ವೈಷ್ಣವ್ (Ashwini Vaishnaw) ಅವರು ಈ ಜಾಲತಾಣಕ್ಕೆ ಚಾಲನೆ ನೀಡಿದರು.
ಸಾಧನಗಳ ಪತ್ತೆ ಮತ್ತು ಟ್ರ್ಯಾಕಿಂಗ್‌ಗಾಗಿ ಗೂಗಲ್ ಮತ್ತು ಆಪಲ್ ಒದಗಿಸುವ ಸೇವೆಗಳಿಗೆ ಪರ್ಯಾಯವಾಗಿ ಪೋರ್ಟಲ್ ಬಳಕೆಯಾಗಲಿದೆ. ಆಂಡ್ರಾಯ್ಡ್ ಫೋನ್‌ಗಳಿಗಾಗಿ, ಐಒಎಸ್ ಸಾಧನವನ್ನು ಪತ್ತೆಹಚ್ಚಲು ಗೂಗಲ್, ಫೈಂಡ್, ಲಾಕ್, ಅಥವಾ ಎರೇಜ್, ಕಳೆದು ಹೋದ ಸಾಧನದ ಆಯ್ಕೆಯನ್ನು ಒದಗಿಸುತ್ತದೆ. ಬಳಕೆದಾರರು ಐಒಎಸ್ ಸಾಧನ ಪತ್ತೆ ಹಚ್ಚಲು iCloud.com/find ಅಥವಾ ಫೈಂಡ್ ಮೈ ಆಯಪ್ ಬಳಸಬೇಕಾಗುತ್ತದೆ.
ಸಂಚಾರ್ ಸಾಥಿ ಪೋರ್ಟಲ್ ನಾಗರಿಕ ಕೇಂದ್ರಿತ ಪ್ರಾಜೆಕ್ಟ್ ಆಗಿದ್ದು, ಟೆಲಿಕಮ್ಯುನಿಕೇಷನ್ ಇಲಾಖೆಯ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ. ಮೊಬೈಲ್ ಗ್ರಾಹಕರು ಮತ್ತು ಅವರು ಭದ್ರತೆಯನ್ನು ಹೆಚ್ಚಿಸುವುದಕ್ಕಾಗಿ ಕೈಗೊಳ್ಳಲಾಗಿದೆ. ಜನರು ತಮ್ಮ ಹೆಸರಿನಲ್ಲಿ ನೀಡಲಾದ ಮೊಬೈಲ್ ಸಂಪರ್ಕಗಳನ್ನು ನೋಡಲು, ಅಗತ್ಯವಿಲ್ಲದ ಸಂಪರ್ಕ ಕಡಿತಗೊಳಿಸಲು, ಕಾಣೆಯಾದ ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲು ಅಥವಾ ಪತ್ತೆಹಚ್ಚಲು ಮತ್ತು ಹೊಸ ಅಥವಾ ಬಳಸಿದ ಮೊಬೈಲ್ ಫೋನ್ ಖರೀದಿಸುವಾಗ ಸಾಧನಗಳ ದೃಢೀಕರಣವನ್ನು ಪರಿಶೀಲಿಸಲು ಸಂಚಾರ್ ಸಾಥಿ ನೆರವಾಗಲಿದೆ.
ಸಂಚಾರ್ ಸಾಥಿ ಪೋರ್ಟಲ್ ಸಿಇಐಆರ್(ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್), ನೋ ಇವರ್ ಮೊಬೈಲ್(ಕೆವೈಎಂ) ಮತ್ತು ಎಎಸ್‌ಟಿಆರ್‌ಗಳನ್ನು ಒಳಗೊಂಡಿದೆ. ಸಿಇಐಆರ್ ಆರಂಭಿಕ ಪ್ರಾಜೆಕ್ಟ್ ಆಗಿದ್ದು, ಟೆಲಿಕಾಂ ಸಚಿವಾಲಯವು ದೇಶದ ಕೆಲವು ಟೆಲಿಕಾಂ ಸರ್ಕಲ್‌ಗಳಲ್ಲಿ ಆರಂಭಿಸಿದೆ. ಈ ಪೋರ್ಟಲ್, ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಆಯಂಡ್ ಕಂನ್ಸೂಮರ್ ಪ್ರೊಟೆಕ್ಷನ್(ಟಿಎಎಫ್‍ಸಿಒಪಿ) ಮತ್ತೊಂದು ಮಾದರಿಯನ್ನು ಒಳಗೊಂಡಿದೆ.
ಟಿಎಎಫ್‌ಸಿಒಪಿ ಮೊಬೈಲ್ ಬಳಕೆದಾರರಿಗೆ ತನ್ನ ಹೆಸರಿನಲ್ಲಿ ತೆಗೆದುಕೊಂಡ ಮೊಬೈಲ್ ಸಂಪರ್ಕಗಳ ಸಂಖ್ಯೆಯನ್ನು ಪರಿಶೀಲಿಸಲು ಅನುಮತಿಸುತ್ತದೆ. ಅನವಶ್ಯಕ ಅಥವಾ ಚಂದಾದಾರರು ಬಳಸದ ಮೊಬೈಲ್ ಸಂಪರ್ಕಗಳನ್ನು ವರದಿ ಮಾಡುವುದನ್ನು ಇದು ಸುಲಭಗೊಳಿಸುತ್ತದೆ. ಇಲ್ಲಿಯವರೆಗೆ ಸಿಇಐಆರ್ ಮೂಲಕ 4,80,000 ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡಲಾಗಿದೆ. 2,40,000 ಮೊಬೈಲ್ ಫೋನ್‌ಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಲಾಗಿದೆ. ಅದೇ ರೀತಿ, ಟಿಎಎಫ್‌ಸಿಒಪಿ ಮೂಲಕ ಟೆಲಿಕಾಂ ಸಚಿವಾಲಯವು, 80 ಸಾವಿರ ಮನವಿಗಳನ್ನು ಪಡೆದುಕೊಂಡಿದ್ದು, ಈ ಪೈಕಿ 1600 ಮನವಿಗಳನ್ನು ಪರಿಹರಿಸಲಾಗಿದೆ.