ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಖವಿದ್ದರೂ, ನೋವಿದ್ದರೂ, ಸಂಬಳ ಜಾಸ್ತಿಯಾದರೆ, ಬಡ್ತಿ ಸಿಕ್ಕರೆ ಏನೇ ಆಗಲಿ ಎಲ್ಲದಕ್ಕೂ ಒಂದೇ ದಾರಿ ಸೆಲಬ್ರೇಷನ್. ಈ ಸೆಲಬ್ರೇಷನ್ ಅಂದ್ರೆ ಕಾಮನ್ ಆಗಿ ಮದ್ಯ ಇದ್ದೇ ಇರುತ್ತದೆ. ಎಷ್ಟೋ ಜನ ಮದ್ಯದ ಅಮಲಿನಲ್ಲಿ ತೊಡಗಿದ್ದಾರೆ.. ಆದರೆ, ಮಾದಕ ವ್ಯಸನಿಗಳು ಜಾಗೃತರಾಗುವ ಸಮಯ ಬಂದಿದೆ. ಇದುವರೆಗೂ ಮದ್ಯ ಸೇವನೆಯಿಂದ ಲಿವರ್ ಹಾಳಾಗುತ್ತದೆ ಎಂದು ಜನ ಅಂದುಕೊಳ್ಳುತ್ತಿದ್ದರು. ಆದರೆ ಇದೀಗ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೈದರಾಬಾದ್ ನಲ್ಲಿ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.
ಮಾದಕ ದ್ರವ್ಯ ಸೇವಿಸುವವರಲ್ಲಿ ‘ಲಿಕ್ಕರ್ ಅಲರ್ಜಿ’ ಎಂಬ ಅಪರೂಪದ ಕಾಯಿಲೆಯು ಕೆಂಪು ದದ್ದುಗಳಿಂದ ಬರುತ್ತದೆ ಎಂಬುದು ಬಹಳ ಜನರಿಗೆ ತಿಳಿದಿಲ್ಲ. ಆಗ್ರಾದಿಂದ ಬಂದಿದ್ದ ಜಾನ್ ಎಂಬ 36 ವರ್ಷದ ವ್ಯಕ್ತಿಗೆ ಈ ಕಾಯಿಲೆ ಇರುವುದು ಪತ್ತೆಯಾಗಿದೆ. ಹೈದರಾಬಾದ್ನ ಅಶ್ವಿನಿ ಅಲರ್ಜಿ ಕೇಂದ್ರದ ವೈದ್ಯರು ಜಾನ್ಗೆ ಈ ರೋಗ ತಗುಲಿದೆ ಎಂದು ತಿಳಿಸಿದ್ದಾರೆ. ಇದೊಂದು ಅಪರೂಪದ ಕಾಯಿಲೆಯಾಗಿದ್ದು, ಮದ್ಯಪಾನ ಮಾಡುವುದರಿಂದ ಕೆಲವರ ದೇಹದಲ್ಲಿ ಅಲರ್ಜಿಯ ಬದಲಾವಣೆಗಳು ಕಂಡು ಬರುತ್ತವೆ. ಚರ್ಮದ ತುರಿಕೆ ಮತ್ತು ಎದೆಯಲ್ಲಿ ಬಿಗಿತದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸುಧಾರಿಸಿದ್ದರಿಂದ ನಂತರ ಮತ್ತೆ ಕುಡಿತ ಶುರು ಮಾಡಿ ಮತ್ತೆ ಅದೇ ಸ್ಥಿತಿ ಬಂತು.
ಜಾನ್ ತನ್ನ ದೇಹದಲ್ಲಿನ ಈ ಬದಲಾವಣೆಗಳ ಬಗ್ಗೆ ಹಲವು ವೈದ್ಯರ ಸಲಹೆ ಪಡೆದರು.. ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದರು.. ಕೊನೆಗೆ ಅಶ್ವಿನಿ ಅಲರ್ಜಿ ಕೇಂದ್ರದಲ್ಲಿ ಡಾ.ನಾಗೇಶ್ವರ್ ನೇತೃತ್ವದ ವೈದ್ಯರ ತಂಡ ಅವರನ್ನು ಪರೀಕ್ಷಿಸಿ ಅಪರೂಪದ ಆಲ್ಕೋಹಾಲ್ ಅಲರ್ಜಿಯನ್ನು ಗುರುತಿಸಿತು. ಮಸಾಲಾ ಕಡಲೆಬೀಜ, ಬಟಾಣಿ, ಚಿಕನ್, ಮಟನ್ ರೋಸ್ಟ್ ನಂತಹ ಹಿಸ್ಟಮಿನ್ ಹೆಚ್ಚಿರುವ ಆಹಾರ ಸೇವಿಸಿದರೆ ಭಯಂಕರ ಅಲರ್ಜಿ ಬರಬಹುದು ಎಂದು ವೈದ್ಯರು ಹೇಳಿದ್ದಾರೆ. ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ.. ಜೀವಕ್ಕೂ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.