ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಾರು ಮೂರು ವರ್ಷದ ಮಗುವೊಂದು ಹೆಬ್ಬಾವಿನೊಂದಿಗೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಯಾವ ಭಯವೂ ಇಲ್ಲದೆ ಅದರ ಮೇಲೆ ಹತ್ತಿ.. ತಲೆ ಹಿಡಿದು ಮೈಮೇಲೆ ಬಿದ್ದು ಹೊರಳಾಡುತ್ತಿದೆ ಮಗು. ಇದನ್ನೆಲ್ಲಾ ನೋಡಿದ ನೆಟ್ಟಗರು ಶಾಕ್ ಆಗಿದ್ದಾರೆ. ತಂದೆ-ತಾಯಿ ಬಾಲಕನ ಕಡೆಗಣನೆ ಮಾಡುತ್ತಿದ್ದಾರೆಂದು ಆಕ್ರೋಶ ಹೊರಹಾಕಿದರು.
ಈ ವಿಡಿಯೋವನ್ನು ಟ್ವಿಟರ್ ಬಳಕೆದಾರ @TheFigen ಅವರು ‘ಬೇಜವಾಬ್ದಾರಿ ಪೋಷಕರು’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ನೆಟಿಜನ್ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರಿಗೆ ಮಗುವಿನ ಸುರಕ್ಷತೆಯ ಚಿಂತೆ.. ಇನ್ನು ಕೆಲವರಿಗೆ ಮಗು ಹೆದರದೇ ಇರುವುದನ್ನು ಕಂಡು ಅಚ್ಚರಿಗೊಂಡರು. ವಾಸ್ತವವಾಗಿ, ಯಾವುದೇ ಅಜಾಗರೂಕತೆಯು ಕೆಲವೊಮ್ಮೆ ಅಪಾಯಕಾರಿಯಾಗಬಹುದು.
Irresponsible parents. pic.twitter.com/LDJWbYvIS2
— Figen (@TheFigen_) May 16, 2023