BIG NEWS : ‘ಸಿದ್ದರಾಮಯ್ಯ’ ಕ್ಯಾಬಿನೆಟ್ ನಲ್ಲಿ ಯಾರಿಗೆ ಮಂತ್ರಿ ಭಾಗ್ಯ? ಇಲ್ಲಿದೆ ಫೈನಲ್ ಲಿಸ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನದ ಪಟ್ಟ ನೀಡಿದೆ.

ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಪೈಪೋಟಿಗೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಆಗಿ ‘ಸಿದ್ದರಾಮಯ್ಯ ‘, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿದ್ದಾರೆ. ಇಂದು 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಎಲ್ಲಾ ಶಾಸಕರು ಹಾಜರಾಗಲಿದ್ದು, ಸದ್ಯದಲ್ಲೇ ನೂತನ ಸಚಿವ ಸಂಪುಟ ಕೂಡ ಅಸ್ತಿತ್ವಕ್ಕೆ ಬರಲಿದೆ.

ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಹೈಕಮಾಂಡ್ ಕೆಲ ಸೂತ್ರಗಳನ್ನು ಸಿದ್ಧಪಡಿಸಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೆವಾಲಾ, ಕೆ.ಸಿ. ವೇಣುಗೋಪಾಲ್ ಹಾಗೂ ಚುನಾವಣಾ ಕಾರ್ಯತಂತ್ರ ಉಸ್ತುವಾರಿ ಸುನಿಲ್ ಕನುಗೋಲು ಸೇರಿ ಸಚಿವರ ಶಾರ್ಟ್ ಲಿಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ: 

ಬೆಂಗಳೂರು- ಕೆಜೆ ಜಾರ್ಜ್/ ರಾಮಲಿಂಗಾ ರೆಡ್ಡಿ, ಹ್ಯಾರಿಸ್, ಎಂ. ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್
ಬೆಂಗಳೂರು ಗ್ರಾಮಾಂತರ. ಕೆಚ್ ಮುನಿಯಪ್ಪ
ಬೆಳಗಾವಿ-ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್. ಸತೀಶ್ ಜಾರಕಿಹೊಳಿ
ಬಾಗಲಕೋಟೆ – ಆರ್.ಬಿ.ತಿಮ್ಮಾಪುರ
ಹಾವೇರಿ – ರುದ್ರಪ್ಪ ಲಮಾಣಿ
ಬಳ್ಳಾರಿ – ತುಕಾರಾಮ್, ನಾಗೇಂದ್ರ
ಚಿತ್ರದುರ್ಗ – ರಘುಮೂರ್ತಿ
ದಾವಣಗೆರೆ – ಶಾಮನೂರು ಶಿವಶಂಕರಪ್ಪ/ ಎಸ್‌ಎಸ್ ಮಲ್ಲಿಕಾರ್ಜುನ
ಶಿವಮೊಗ್ಗ – ಮಧು ಬಂಗಾರಪ್ಪ, ಬಿ.ಕೆ.ಸಂಗಮೇಶ್
ಚಿಕ್ಕಮಗಳೂರು – ಟಿ.ಡಿ. ರಾಜೇಗೌಡ
ತುಮಕೂರು – ಡಾ. ಜಿ. ಪರಮೇಶ್ವರ್, ಎಸ್ ಆರ್. ಶ್ರೀನಿವಾಸ್, ಕೆಎನ್ ರಾಜಣ್ಣ
ಗದಗ – ಹೆಚ್.ಕೆ. ಪಾಟೀಲ್
ಧಾರವಾಡ – ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ,ಸಂತೋಷ್ ಲಾಡ್
ಉತ್ತರ ಕನ್ನಡ – ಭೀಮಣ್ಣ ನಾಯಕ್
ಮಂಡ್ಯ- ಎನ್ ಚೆಲುವರಾಯ ಸ್ವಾಮಿ
ಚಿಕ್ಕಬಳ್ಳಾಪುರ – ಸುಬ್ಬಾರೆಡ್ಡಿ
ಕೋಲಾರ- ರೂಪ ಶಶೀಧರ್,ನಾರಾಯಣ ಸ್ವಾಮಿ
ಬಿಜಾಪುರ – ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಯಶವಂತ ರಾಯಗೌಡ ಪಾಟೀಲ್
ಕಲಬುರಗಿ – ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಶರಣ ಪ್ರಕಾಶ್ ಪಾಟೀಲ್
ರಾಯಚೂರು – ಬಸನಗೌಡ ತುರುವಿಹಾಳ/ಹಂಪನಗೌಡ ಬಾದರ್ಲಿ
ಯಾದಗಿರಿ – ಶರಣಪ್ಪ ದರ್ಶನಾಪುರ್
ಬೀದರ್ – ರಹೀಮ್ ಖಾನ್, ಈಶ್ವರ್ ಖಂಡ್ರೆ
ಕೊಪ್ಪಳ – ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರೆಡ್ಡಿ
ಮಂಗಳೂರು- ಯುಟಿ ಖಾದರ್
ಮೈಸೂರು-ಎಚ್ಸಿ ಮಾಹದೇವಪ್ಪ,ತನ್ವೀರ್ ಸೇಠ್
ಚಾಮರಾಜನಗರ- ಪುಟ್ಟರಂಗಶೆಟ್ಟಿ
ಕೊಡಗು- ಎ.ಎಸ್.ಪೊನ್ನಣ್ಣ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!