ಹೊಸ ದಿಗಂತ ಡಿಜಿಟಲ್ ಡೆಸ್ಕ್ :
ಕಳೆದೊಂದು ವರ್ಷದಲ್ಲಿ ಎಎಪಿ ಸರ್ಕಾರವು ರಾಜ್ಯದಲ್ಲಿ 29,237 ಮಂದಿಗೆ ಉದ್ಯೋಗ ನೀಡಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ತಿಳಿಸಿದ್ದಾರೆ.
ಮೆರಿಟ್ ಆಧಾರದಲ್ಲೇ ಈ ಎಲ್ಲ ಉದ್ಯೋಗಗಳಿಗೆ ನೇಮಕಾತಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಪೊಲೀಸ್‌ನ ವಿವಿಧ ತನಿಖಾ ದಳದ 144 ನಾಗರಿಕ ಸಹಾಯಕ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಿಸಿದ ಬಳಿಕ ಅವರು ಈ ಬಗ್ಗೆ ವಿವರ್ ನೀಡಿದ್ದಾರೆ.
ರಾಜ್ಯದಲ್ಲಿ ಮುಂದಿನ ನಾಲ್ಕು ವರ್ಷಗಳವರೆಗೆ ವರ್ಷಂಪ್ರತಿ 1,800 ಕಾನ್‌ಸ್ಟೆಬಲ್ ಮತ್ತು 300 ಸಬ್ ಇನ್ಸ್‌ಪೆಕ್ಟರ್‌ಗಳನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಕಳೆದೊಂದು ವರ್ಷದಲ್ಲಿ ಪಂಜಾಬ್ ಪೊಲೀಸ್ ಅನೇಕ ಕಾರ್ಯಾಚರಣೆಗಳ ನಡೆಸಿದೆ. ದೇಶದಲ್ಲೇ ಪಂಜಾಬ್ ಪೊಲೀಸ್ ನಂ.1 ಆಗಿ ಪರಿಗಣಿಸಿರುವುದು ಹೆಮ್ಮೆಯ ವಿಚಾರ ಎಂದರು.