ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತಿ ರಿಸರ್ವ್ ಬ್ಯಾಂಕ್ ನಲ್ಲಿ 291 ಖಾಲಿ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಅಭ್ಯರ್ಥಿಗಳು ಪದವಿ, ಸ್ನಾತಕೋತ್ತರ ಪದವಿ (PG) ಪೂರ್ಣಗೊಳಿಸಿರಬೇಕು. ಕನಿಷ್ಠ 21 ರಿಂದ ಗರಿಷ್ಠ 30 ವರ್ಷ ವಯೋಮಿತಿಯೊಳಗಿರಬೇಕು. ಎಂಫಿಲ್ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 32 ವರ್ಷ ನಿಗದಿ ಮಾಡಲಾಗಿದೆ. ಪಿಎಚ್ಡಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 34 ವರ್ಷ ನಿಗದಿ ಮಾಡಲಾಗಿದೆ.
ಸಾಮಾನ್ಯ ಅರ್ಜಿದಾರರು ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳು ಆರ್ಬಿಐ ಗ್ರೇಡ್ ಗ್ರೇ ಡ್-ಬಿ 2023ರ ಪರೀಕ್ಷೆ ಗೆ 850 ರೂಪಾಯಿ ಮತ್ತು ಎಸ್ಸಿ- ಎಸ್ಟಿ ಹಾಗೂ ಅಂಗವಿಕಲರಿಗೆ ವರ್ಗದವರಿಗೆ 100 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಜೂನ್ 9,2023 ಕೊನೆಯ ದಿನವಾಗಿರುತ್ತದೆ.