ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ವೈದ್ಯ, ನಾರಾಯಣ ನೇತ್ರಾಲಯದ ಅಧ್ಯಕ್ಷ ಭುಜಂಗ ಶೆಟ್ಟಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಭುಜಂಗ ಶೆಟ್ಟಿಯವರಿಗೆ ಡಯಾಬಿಟಿಸ್ ಕಾಡಿದ್ದು, ಇದಕ್ಕಾಗಿ ರಿವರ್ಸ್ ಡಯಾಬಿಟಿಸ್ ಎನ್ನುವ ಪದ್ಧತಿಯನ್ನೇ ಆವಿಷ್ಕಾರ ಮಾಡಿದ ಶ್ರೇಯ ಭುಜಂಗ ಶೆಟ್ಟಿಯವರದ್ದು.
ತಮ್ಮದೇ ಆದ ವಿನೂತನ ಪ್ರಯೋಗದ ಮೂಲಕ ತಮಗಿದ್ದ ಡಯಾಬಿಟಿಸ್‌ನ್ನು ಹೊಡೆದೋಡಿಸಿದ್ದರು ಡಾ. ಭುಜಂಗ ಶೆಟ್ಟಿ. ಈ ಆಹಾರ ಕ್ರಮವನ್ನು ಇತರರ ಜೊತೆಯೂ ಹಂಚಿಕೊಂಡಿದ್ದು, ಸಾಕಷ್ಟು ಮಧುಮೇಹಿಗಳು ಡಯಾಬಿಟಿಸ್ ಹೊಡೆದೋಡಿಸಿದರು.
ಈ ಆಹಾರ ಪದ್ಧತಿಯಿಂದ ಸಾಕಷ್ಟು ಮಂದಿ ಪ್ರಭಾವಿತರಾಗಿದ್ದರು. ವೈದ್ಯಲೋಕದ ಅತ್ಯುತ್ತಮ ವೈದ್ಯರನ್ನು ಇಂದು ರಾಜ್ಯ ಕಳೆದುಕೊಂಡಿದೆ.
ದಿನವೂ ತಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಾಗಿ ಇರುತ್ತದೆ. ಅಕ್ಕಿ, ರಾಗಿ ಹಾಗೂ ಗೋಧಿ ಎಲ್ಲದರಲ್ಲಿಯೂ ಕಾರ್ಬೋಹೈಡ್ರೇಟ್ ಹೆಚ್ಚಿರುತ್ತದೆ. ದಿನಕ್ಕೆ ನಮಗೆ ಶೇ. 40ರಿಂದ-60ರಷ್ಟು ಕಾರ್ಬೋಹೈಡ್ರೇಟ್ ಬೇಕು. ಆದರೆ ನಾವು ತಿನ್ನು ಆಹಾರದಿಂದ ಶೇ.80ರಷ್ಟು ಕಾರ್ಬೋಹೈಡ್ರೇಟ್ ನಮ್ಮ ದೇಹಕ್ಕೆ ಸೇರುತ್ತದೆ.
ಇದನ್ನು ಜೀರ್ಣ ಮಾಡಿಕೊಳ್ಳೋದಕ್ಕೆ ಹೆಚ್ಚು ಇನ್ಸುಲಿನ್ ಅಗತ್ಯವಿದೆ, ಆದರೆ ಮಧುಮೇಹಿಗಳಿಗೆ ಇನ್ಸುಲಿನ ಉತ್ಪಾದನೆ ಕಡಿಮೆ ಹಾಗಾಗಿ ಮಧುಮೇಹಿಗಳು ಒಂದು ಬೌಲ್ ಅನ್ನ ತಿಂದರೆ ಎರಡು ಬೌಲ್ ತರಕಾರಿ ತಿನ್ನಬೇಕು. ಗಾಣದ ಎಣ್ಣೆ ಬಳಸಬೇಕು, ಗ್ರೀನ್ ಟೀ ಉತ್ತಮ ಹಾಗೂ ಮಾಂಸಾಹಾರ ಕೂಡ ಸೇವನೆ ಮಾಡಿ ಎಂದು ಭುಜಂಗ ಶೆಟ್ಟಿ ರಿವರ್ಸ್ ಡಯಾಬಿಟಿಸ್ ಬಗ್ಗೆ ಹೇಳಿದ್ದರು.
ಮಧುಮೇಹಿಗಳಿಗೆ ವೈದ್ಯಕೀಯ ಚಿಕಿತ್ಸೆ ವೆಚ್ಚ ಹೆಚ್ಚು, ಮಾತ್ರೆಗಳು, ಔಷಧಕ್ಕೆ ಹಣ ವ್ಯಯಿಸಬೇಕು. ಅದರ ಬದಲು ಊಟ ತಿಂಡಿಯಿಂದಲೇ ಡಯಾಬಿಟಿಸ್ ಓಡಿಸಬಹುದು ಎಂದು ಭುಜಂಗ ಶೆಟ್ಟಿ ಹೇಳಿದ್ದರು.