ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂಬರುವ ವರ್ಷದ ಭರ್ಜರಿ ಕ್ರಿಕೆಟ್ ಸರಣಿಗಳ ವೇಳಾಪಟ್ಟಿಯನ್ನು ಅನಧಿಕೃತವಾಗಿ ಪ್ರಕಟಿಸಿದೆ. ಈ ಪ್ರಕಾರ, ಬರೋಬ್ಬರಿ 5 ತಿಂಗಳ ಕಾಲ ದೇಶದಲ್ಲಿ ಒಂದರ ಹಿಂದೊಂದು ಕ್ರಿಕೆಟ್ ಹಬ್ಬ ಜರುಗಲಿದ್ದು, ಅಭಿಮಾನಿಗಳಿಗೆ ಸತತ ಮನರಂಜನೆ ಸಿಗುವುದು ಖಚಿತವಾಗಿದೆ.
ವರ್ಷದ ಆರಂಭದಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ನೊಂದಿಗೆ ಕ್ರಿಕೆಟ್ ಹಬ್ಬಕ್ಕೆ ಚಾಲನೆ ಸಿಗಲಿದೆ.
ಆರಂಭ: ಜನವರಿ 9
ಫೈನಲ್: ಫೆಬ್ರವರಿ 5
ಐದು ತಂಡಗಳ ನಡುವಿನ ಈ ಕದನ, ಮಹಿಳಾ ಕ್ರಿಕೆಟ್‌ನ ರೋಮಾಂಚನವನ್ನು ಮೊದಲು ಪರಿಚಯಿಸಲಿದೆ.
WPL ಮುಕ್ತಾಯವಾಗುತ್ತಿದ್ದಂತೆಯೇ, ಇಡೀ ಕ್ರಿಕೆಟ್ ಜಗತ್ತಿನ ಕಣ್ಣು T20 ವಿಶ್ವಕಪ್‌ನತ್ತ ನೆಡಲಿದೆ. ಈ ಪ್ರತಿಷ್ಠಿತ ಟೂರ್ನಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿವೆ.
ಆರಂಭ: ಫೆಬ್ರವರಿ 7
ಫೈನಲ್: ಮಾರ್ಚ್ 8
ವಿಶ್ವಕಪ್‌ನ ರಂಗು ಕೇವಲ ಒಂದು ತಿಂಗಳ ಕಾಲ ಅಭಿಮಾನಿಗಳನ್ನು ಹಿಡಿದಿಡಲಿದೆ.
T20 ವಿಶ್ವಕಪ್ ಮುಗಿದು ಕೇವಲ 17 ದಿನಗಳ ಬಳಿಕ, ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-19 ರ ರಂಗು ರಂಗಿನ ಮೇಳ ಶುರುವಾಗಲಿದೆ.
ಆರಂಭ: ಮಾರ್ಚ್ 26
ಫೈನಲ್: ಮೇ 31
ಈ ಬಾರಿ ಐಪಿಎಲ್ ಪಂದ್ಯಾವಳಿಯನ್ನು ಬರೋಬ್ಬರಿ 67 ದಿನಗಳ ಕಾಲ ವಿಸ್ತರಿಸಲು ಬಿಸಿಸಿಐ ನಿರ್ಧರಿಸಿದೆ.
ಜನವರಿ 9 ರಂದು WPL ಆರಂಭದಿಂದ ಹಿಡಿದು ಮೇ 31 ರಂದು IPL ಫೈನಲ್ ತನಕವೂ ಕ್ರಿಕೆಟ್‌ನ ಸುಗ್ಗಿ ಇರಲಿದ್ದು, ಅಭಿಮಾನಿಗಳಿಗೆ ಕ್ರಿಕೆಟ್ ಜ್ವರ ಕಾಯಂ ಆಗಲಿದೆ.

