ಪ್ರಮಾಣವಚನ ಸಮಾರಂಭ – ಚರ್ಚೆಯಲ್ಲಿದೆ ಕನ್ನಡ

ಹೊಸದಿಗಂತ ಡಿಜಿಟಲ್ ಡೆಸ್ಕ್

ಕರ್ನಾಟಕದ ನೂತನ ಸರ್ಕಾರದ ಪ್ರಮಾಣವಚನ ಸಮಾರಂಭ ವೀಕ್ಷಿಸಿದವರು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಎರಡು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಮೊದಲನೆಯದ್ದು- ಕಾರ್ಯಕ್ರಮದ ನಿರೂಪಣೆಗೆ ಮಾಡುತ್ತಿದ್ದ ಮಹಿಳೆ ಯಾರು? ತುಂಬ ಕಷ್ಟಪಟ್ಟು ಕನ್ನಡ ಮಾತನಾಡುತ್ತಿದ್ದ ಅವರ ಉಚ್ಛಾರಶೈಲಿಯೂ ಕನ್ನಡದ ಜಾಯಮಾನಕ್ಕೆ ಒಗ್ಗುತ್ತಿರಲಿಲ್ಲವಾದ್ದರಿಂದ ಇಂಥದೊಂದು ಪ್ರಶ್ನೆ ಎದ್ದಿದೆ.

ಎರಡನೆಯದಾಗಿ ಜನ ಕೇಳುತ್ತಿರುವ ಪ್ರಶ್ನೆ- ಜಮೀರ್ ಅಹಮ್ಮದ್ ಅವರು ಇಂಗ್ಲಿಷಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇಕೆ? ಕನ್ನಡ ಸಾಹಿತ್ಯ ಪರಿಷತ್ತು ಇರುವ ಚಾಮರಾಜಪೇಟೆಯನ್ನು ಪ್ರತಿನಿಧಿಸುತ್ತಿರುವ ಅವರು ಕನ್ನಡದಲ್ಲಿ ಪ್ರತಿಜ್ಞಾವಿಧಿ ಪೂರೈಸುವುದಕ್ಕೆ ಅದ್ಯಾವ ಅಡ್ಡಿ ಇತ್ತು?

ಕನ್ನಡ-ಕರ್ನಾಟಕದ ಅಸ್ಮಿತೆಯನ್ನು ಒಳಗೊಂಡಂತೆ ಈ ಬಾರಿಯ ಕಾಂಗ್ರೆಸ್ ಚುನಾವಣಾ ಪ್ರಚಾರಾಂದೋಲನವಿತ್ತು. ಹೀಗಿರುವಾಗ ಆಂಗ್ಲದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದೇಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!