ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಮನದಲ್ಲಿ ಗೊಂದಲ, ನೋವು, ಒತ್ತಡ. ಇದರಿಂದ ವಿವೇಕದ ನಿರ್ಧಾರ ತಾಳಲು ವಿಫಲರಾಗುವಿರಿ. ಏಕಾಂಗಿಯಾಗಿ ಕೂತು ನಿರಾಳರಾಗಲು ಯತ್ನಿಸಿ.
ವೃಷಭ
ಖರ್ಚು ನಿಮ್ಮ ನಿಯಂತ್ರಣ ತಪ್ಪಬಹುದು. ಖರೀದಿಯ ಹುಮ್ಮಸ್ಸಿಗೆ ಕಡಿವಾಣ ಹಾಕಿ. ಕೌಟುಂಬಿಕ ಒತ್ತಡ ಹೆಚ್ಚುವುದು.
ಮಿಥುನ
ಅಶಾಂತ ಮನಸ್ಥಿತಿ ಯಿಂದ ದಿನ ಆರಂಭ. ಆದರೆ ಸಂಜೆ ವೇಳೆಗೆ ನಿಮ್ಮ ಮನಸ್ಸು ತಹಬಂದಿಗೆ ಬರುವುದು. ಉದ್ದೇಶಿಸಿದ ಕಾರ್ಯ ಈಡೇರುವುದು.
ಕಟಕ
ಸಂತೋಷಕ್ಕೆ ಕಾರಣಗಳಿದ್ದರೂ ಅದಕ್ಕಿಂತ ಹೆಚ್ಚು ಬೇಗುದಿ ಮನದಲ್ಲಿದೆ. ಹಾಗಾಗಿ ಚಿಂತೆ ಪರಿಹರಿಸಲು ಆದ್ಯತೆ ಕೊಡಿ. ಅವಶ್ಯ ನೆರವು ಪಡೆಯಿರಿ.
ಸಿಂಹ
ಕೆಲವು ದಿನಗಳಿಂದ ಯಾವುದೋ ವಿಚಾರ ಮನಸ್ಸು ಕೊರೆಯುತ್ತದೆ. ಅದಕ್ಕೆ ಸೂಕ್ತ ಉತ್ತರ ಇಂದು ದೊರಕುವುದು. ವೈಯಕ್ತಿಕ ಹಿತಾಸಕ್ತಿಗೆ ಆದ್ಯತೆ ಕೊಡಿರಿ.
ಕನ್ಯಾ
ಹೆಚ್ಚು ಯೋಜಿಸಿ ಕಾರ್ಯ ಎಸಗಿದರೆ ಉತ್ತಮ ಫಲ ಪಡೆಯುವಿರಿ. ಇತರರ ಪ್ರಭಾವಕ್ಕೆ ಒಳಗಾಗಿ ವರ್ತಿಸಬೇಡಿ. ಕೌಟುಂಬಿಕ ಅತೃಪ್ತಿ.
ತುಲಾ
ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಹೊಂದಾಣಿಕೆ ತರುವುದು ನಿಮಗೆ ಕಷ್ಟವಾಗಲಿದೆ. ಕುಟುಂಬ ಸದಸ್ಯರ ಹಿತಾಸಕ್ತಿಗೂ ಗಮನ ಕೊಡಿ.
ವೃಶ್ಚಿಕ
ಆಪ್ತರ ಜತೆಗಿನ ಸಂಬಂಧದಲ್ಲಿ ಬಿರುಕು ಮೂಡೀತು. ಅದಕ್ಕೆ ನಿಮ್ಮ ಬಿರುಸು ಮಾತು, ಉದ್ಧಟ ವರ್ತನೆ ಕಾರಣವಾದೀತು. ಸಂಯಮ ತಂದುಕೊಳ್ಳಿ.
ಧನು
ಹೆಚ್ಚು ಹೊಣೆಗಾರಿಕೆ ವಹಿಸಬೇಕಾಗುವುದು. ಅದನ್ನು ಸಮರ್ಥವಾಗಿ ನಿಭಾಯಿಸಿ. ಆಪ್ತರ ಸಂಗದಲ್ಲಿ ಕಾಲಕ್ಷೇಪ. ಆರ್ಥಿಕ ಬಿಕ್ಕಟ್ಟು ನಿವಾರಣೆ.
ಮಕರ
ಆತ್ಮೀಯ ಸಂಬಂಧ ಉಳಿಸಿಕೊಳ್ಳಲು ಗಮನ ಕೊಡಿ. ಕ್ಷುಲ್ಲಕ ಕಾರಣಕ್ಕಾಗಿ ಬಂಧುತ್ವ ಕಳಕೊಳ್ಳಬೇಡಿ. ಕೌಟುಂಬಿಕ ಒತ್ತಡ ಕಡಿಮೆಗೊಳಿಸಿ.
ಕುಂಭ
ಹಿರಿಯರ ಜತೆ ಅನವಶ್ಯ ವಾಗ್ವಾದ ನಡೆದೀತು. ಸಾಧ್ಯವಾದಷ್ಟು ಅದನ್ನು ತಪ್ಪಿಸಿರಿ. ಪ್ರೀತಿಪಾತ್ರರ ಭಾವನೆಗೆ ಬೆಲೆ ಕೊಡಿ. ಅವರನ್ನು ಕಡೆಗಣಿಸಬೇಡಿ.
ಮೀನ
ಖರ್ಚು ಹೆಚ್ಚುವ ಪ್ರಸಂಗ ಒದಗುವುದು. ಕುಟುಂಬ ಸದಸ್ಯರ ಬೇಡಿಕೆಗಳನ್ನು ಈಡೇರಿಸಬೇಕು. ನಿಮ್ಮ ಟೀಕಿಸುವವರನ್ನು ಕಡೆಗಣಿಸಿ.