ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಕಲಾಪದಲ್ಲಿ ನೂತನ ಶಾಸಕರಿಂದ ಪ್ರಮಾಣವಚನ ಪ್ರಕ್ರಿಯೆ ಆರಂಭವಾಗಿದೆ.
ಸದನದಲ್ಲಿ ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆ ಪ್ರತಿಜ್ಞಾವಿಧಿ ಬೋಧಿಸಿದ್ದು, ಮೊದಲಿಗೆ ವರುಣಾ ಕ್ಷೇತ್ರದ ಶಾಸಕರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನಕಪುರದ ಶಾಸಕರಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಶಾಸಕರಿವರು..
- ಕೊರಟಗೆರೆ ಕ್ಷೇತ್ರದ ಶಾಸಕರಾಗಿ ಡಾ.ಜಿ.ಪರಮೇಶ್ವರ್
- ದೇವನಹಳ್ಳಿ ಶಾಸಕರಾಗಿ ಕೆ. ಎಚ್ .ಮುನಿಯಪ್ಪ
- ಸರ್ವಜ್ಞನಗರ ಕ್ಷೇತ್ರದ ಶಾಸಕರಾಗಿ ಕೆ.ಜೆ.ಜಾರ್ಜ್
- ಬಬಲೇಶ್ವರ ಕ್ಷೇತ್ರದ ಶಾಸಕರಾಗಿ ಎಂ.ಬಿ.ಪಾಟೀಲ್
- ಯಮಕನಮರಡಿ ಶಾಸಕರಾಗಿ ಸತೀಶ್ ಜಾರಕಿಹೊಳಿ
- ಚಿತ್ತಾಪುರ ಶಾಸಕರಾಗಿ ಪ್ರಿಯಾಂಕ್ ಖರ್ಗೆ
- ಬಿಟಿಎಂ ಲೇಔಟ್ ಶಾಸಕರಾಗಿ ರಾಮಲಿಂಗಾರೆಡ್ಡಿ
- ಮಂಗಳೂರು ಶಾಸಕರಾಗಿ ಯು.ಟಿ.ಖಾದರ್
- ಶಾಂತಿನಗರ ಕ್ಷೇತ್ರದ ಶಾಸಕರಾಗಿ ಎನ್.ಎ.ಹ್ಯಾರಿಸ್
- ಗಂಗಾವತಿ ಕ್ಷೇತ್ರದ ಶಾಸಕರಾಗಿ ಗಾಲಿ ಜನಾರ್ದನರೆಡ್ಡಿ
- ತುಮಕೂರು ನಗರ ಕ್ಷೇತ್ರದ ಶಾಸಕರಾಗಿ ಜ್ಯೋತಿ ಗಣೇಶ್
- ಉತ್ತರ ಕ್ಷೇತ್ರದ ಶಾಸಕಿಯಾಗಿ ಖನೀಜ್ ಫಾತಿಮಾ
- ಕುಂದಾಪುರ ಕ್ಷೇತ್ರದ ಶಾಸಕರಾಗಿ ಎ.ಕಿರಣ್ ಕುಮಾರ್ ಕೊಡಗಿ
- ಕೋಲಾರ ಕ್ಷೇತ್ರದ ಶಾಸಕರಾಗಿ ಕೊತ್ತೂರು ಜಿ.ಮಂಜುನಾಥ
- ಕೊಳ್ಳೇಗಾಲ ಕ್ಷೇತ್ರದ ಶಾಸಕರಾಗಿ ಎ.ಆರ್.ಕೃಷ್ಣಮೂರ್ತಿ
- ವಿಜಯನಗರ ಕ್ಷೇತ್ರದ ಶಾಸಕರಾಗಿ ಎಂ.ಕೃಷ್ಣಪ್ಪ
- ತುರುವೇಕೆರೆ ಕ್ಷೇತ್ರದ ಶಾಸಕರಾಗಿ ಎಂ.ಟಿ.ಕೃಷ್ಣಪ್ಪ
- ಹೂವಿನಹಡಗಲಿ ಕ್ಷೇತ್ರದ ಶಾಸಕರಾಗಿ ಕೃಷ್ಣಾ ನಾಯ್ಕ್
- ನಂಜನಗೂಡು ಶಾಸಕರಾಗಿ ದರ್ಶನ್ ಧ್ರುವನಾರಾಯಣ
- ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ