ಹೊಸದಿಗಂತ ಡಿಜಿಟಲ್ ಡೆಸ್ಕ್:
38 ವರ್ಷದ ವ್ಯಕ್ತಿಯೊಬ್ಬ ಏಳು ವರ್ಷದ ಬಾಲಕಿಯನ್ನು ಖರೀದಿಸಿ ಮದುವೆಯಾದ ಭಯಾನಕ ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ಬೆಳಕಿಗೆ ಬಂದಿದೆ.
38 ವರ್ಷದ ಭೂಪಾಲ್ ಸಿಂಗ್ ಅವರ ಕುಟುಂಬ ರಾಜಸ್ಥಾನದ ಧೋಲ್ಪುರದಲ್ಲಿ ನೆಲೆಸಿದೆ. ಇತ್ತೀಚೆಗೆ 7 ವರ್ಷದ ಬಾಲಕಿಯನ್ನು ಆಕೆಯ ತಂದೆಗೆ ರೂ.4.50 ಲಕ್ಷ ನೀಡಿ ಖರೀದಿಸಿ ಮೇ 21 ರಂದು ವಿವಾಹವಾದರು. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸಿಂಗ್ ಮನೆ ಮೇಲೆ ದಾಳಿ ನಡೆಸಿ ಬಾಲಕಿಯನ್ನು ಕುಟುಂಬದಿಂದ ಮುಕ್ತಗೊಳಿಸಿದ್ದಾರೆ. 4.50 ರೂ.ಗೆ ಬಾಲಕಿಯನ್ನು ಖರೀದಿಸಿರುವುದಾಗಿ ಸಿಂಗ್ ಅವರ ಕುಟುಂಬ ಸದಸ್ಯರು ಒಪ್ಪಿಕೊಂಡಿದ್ದಾರೆ ಎಂದು ಡಿಎಸ್ಪಿ ಖಂಡೇಲ್ವಾಲ್ ಹೇಳಿದ್ದಾರೆ.
ಈ ಹಿಂದೆಯೂ ಸಿಂಗ್ ಕುಟುಂಬದ ವಿರುದ್ಧ ಪೊಲೀಸ್ ಕೇಸ್ ಇದೆಯಂತೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.