ಹೊಸ ಸಂಸತ್​ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್​ಜೆಡಿ: ಕಾನೂನು ಸಮರಕ್ಕೆ ಮುಂದಾದ ಬಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ (Coffin) ಹೋಲಿಸಿ ಟ್ವೀಟ್ ಮಾಡಿದ ರಾಷ್ಟ್ರೀಯ ಜನತಾ ದಳದ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಲು ಬಿಜೆಪಿ (BJP) ಸಿದ್ಧವಾಗಿದೆ.

ಇಂದು ನೂತನ ಸಂಸತ್​ ಉದ್ಘಾಟನೆ ನಡುವೆ ಆರ್​ಜೆಡಿ ಟ್ವೀಟ್​ ಮಾಡಿದೆ. ಒಂದು ಕಡೆ ಶವಪೆಟ್ಟಿಗೆಯ ಫೋಟೋ ಮತ್ತು ಇನ್ನೊಂದು ಕಡೆ ಹೊಸ ಸಂಸತ್​ ಫೋಟೋ ಹಾಕಿ ಟ್ವೀಟ್​ ಮಾಡಿರುವ ಆರ್​ಜೆಡಿ ಏನಿದು? ಎಂದು ಅಡಿಬರಹ ನೀಡಿದೆ. ಈ ಮೂಲಕ ಹೊಸ ಸಂಸತ್​ ಭವನವನ್ನು ಶವಪೆಟ್ಟಿಗೆ (ಕಾಫಿನ್​)ಗೆ ಹೋಲಿಕೆ ಮಾಡಿದೆ.

https://twitter.com/RJDforIndia/status/1662659949414203392?s=20

ಈ ಕುರಿತು ಆರ್‌ಜೆಡಿ ನಾಯಕ ಶಕ್ತಿ ಸಿಂಗ್ ಯಾದವ್ ಅವರು ಪ್ರತಿಕ್ರಿಯಿಸಿ, ನಮ್ಮ ಟ್ವೀಟ್‌ನಲ್ಲಿರುವ ಶವಪೆಟ್ಟಿಗೆಯು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುವುದನ್ನು ಪ್ರತಿನಿಧಿಸುತ್ತದೆ. ಇದನ್ನು ದೇಶ ಒಪ್ಪಿಕೊಳ್ಳುವುದಿಲ್ಲ. ಸಂಸತ್ತು ಪ್ರಜಾಪ್ರಭುತ್ವದ ದೇಗುಲವಾಗಿದೆ ಮತ್ತು ಇದು ಚರ್ಚೆಗಳ ಸ್ಥಳವಾಗಿದೆ ಎಂದು ಹೇಳಿದ್ದಾರೆ.

ಆರ್​ಜೆಡಿ ಟ್ವೀಟ್​ಗೆ ಬಿಜೆಪಿ ತಿರುಗೇಟು ನೀಡಿದ್ದು, ಹೊಸ ಸಂಸತ್ ಕಟ್ಟಡದ ವಿನ್ಯಾಸವನ್ನು ಶವಪೆಟ್ಟಿಗೆಯೊಂದಿಗೆ ಹೋಲಿಸಿದವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಹೇಳಿದೆ.

2024ರಲ್ಲಿ ದೇಶದ ಜನರು ನಿಮ್ಮನ್ನು ಈ ಶವಪೆಟ್ಟಿಗೆಯಲ್ಲಿ ಹೂಳುತ್ತಾರೆ ಬಿಜೆಪಿ ವಕ್ತಾರ ಗೌರವ್​ ಭಾಟಿಯಾ ಆರ್​ಜೆಡಿಗೆ ತಿರುಗೇಟು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!