ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಹಿಂಸಾಚಾರ ನಿಗ್ರಹಕ್ಕೆ ಪೊಲೀಸ್ ಪಡೆಯ ಕಮಾಂಡೋಗಳು ಉಗ್ರ ಕಾರ್ಯಾಚರಣೆ ನಡೆಸಿದ್ದು, 40 ಉಗ್ರರು ಹತರಾಗಿದ್ದಾರೆ.
ಇಂದು ಬೆಳಗ್ಗೆಯಿಂದ ಮಣಿಪುರದ ವಿವಿಧೆಡೆ ಕಮಾಂಡೋಗಳು ಸಾಕಷ್ಟು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಈ ಉಗ್ರರು ಜನರಿಗೆ ಸಾಕಷ್ಟು ಹಿಂಸೆ ನೀಡಿದ್ದಾರೆ. ತಮ್ಮ ರೈಫಲ್ಗಳನ್ನು ಬೇಕಾಬಿಟ್ಟಿ ಜನರ ಮೇಲೆ ಪ್ರಯೋಗಿಸಿದ್ದಾರೆ. ಹಳ್ಳಿಗಳಿಗೆ ತೆರಳಿ ಸೀದ ಮನೆಗಳನ್ನು ರಾತ್ರೋ ರಾತ್ರಿ ಸುಟ್ಟು ಹಾಕಿದ್ದಾನೆ. ಇವರ ವಿರುದ್ಧ ಕ್ರಮ ಜರುಗಿಸಲೇಬೇಕಿತ್ತು.
40 ಮಂದಿ ಉಗ್ರರನ್ನು ಸಂಹರಿಸಲಾಗಿರುವ ಬಗ್ಗೆ ವರದಿ ಸಿಕ್ಕಿದೆ ಎಂದು ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ.