ಟರ್ಕಿ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾದ ಎರ್ಡೊಗನ್ ಅಭಿನಂದಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟರ್ಕಿ ಚುನಾವಣೆಯಲ್ಲಿ ಮತ್ತೆ ಅಧ್ಯಕ್ಷರಾಗಿರುವ ರೆಸೆಪ್ ತಯ್ಯಿಪ್ ಎರ್ಡೊಗಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಜಾಗತಿಕ ವಿಷಯಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವು ಮುಂದುವರಿಯಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಟರ್ಕಿಯಲ್ಲಿ ಎರ್ಡೊಗನ್ ಅವರು ಭಾನುವಾರ ನಡೆದ ಮರುಚುನಾವಣೆಯಲ್ಲಿ ವಿಜಯ ಸಾಧಿಸಿದ್ದಾರೆ. ಟರ್ಕಿ ಇತ್ತೀಚೆಗೆ ಭಾರೀ ಭೂಕಂಪಕ್ಕೆ ನಲುಗಿ ಹೋಗಿತ್ತು. ಇಡೀ ಜಗತ್ತೇ ಒಂದು ಬಾರಿ ಭಯಗೊಂಡಿದ್ದು ನಿಜ, ಟರ್ಕಿ ಸ್ನೇಹಿತನಂತೆ ಎಲ್ಲ ರೀತಿ ಕೆಲಸವನ್ನು ಸಹಕಾರ ನೀಡಿದ್ದು ಭಾರತ. ಟರ್ಕಿಯಲ್ಲಿ ಒಂದು ಬಾರಿ ಹಣದುಬ್ಬರ ಬಂದ ಕಾರಣ ಈಗ ಮತ್ತೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ರೆಸೆಪ್ ತಯ್ಯಿಪ್ ಎರ್ಡೊಗಾನ್ ಆಡಳಿತ ಮೂರನೇ ದಶಕದವರೆಗೆ ವಿಸ್ತರಿಸಲಾಗಿದೆ.

ಮೋದಿ ಅವರು ಟ್ವಿಟರ್​​ ಖಾತೆಯಲ್ಲಿ “ಟರ್ಕಿ ಅಧ್ಯಕ್ಷರಾಗಿ ಮರು ಆಯ್ಕೆಯಾದ @RTErdogan ಅವರಿಗೆ ಅಭಿನಂದನೆಗಳು, ಮುಂಬರುವ ದಿನಗಳಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧಗಳು ಮತ್ತು ಜಾಗತಿಕ ವಿಷಯಗಳ ಸಹಕಾರವು ಬೆಳೆಯುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

https://twitter.com/narendramodi/status/1663030103830298625?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!