ಹೊಸದಿಗಂತ ವರದಿ, ಶಿವಮೊಗ್ಗ:
ನಗರದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ವಿನೊಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಶ್ರಯ ಬಿ ಬಡಾವಣೆಯ, ಕುಮಾರ ನಾಯಕ ಅವರ ಪತ್ನಿ
ಲಕ್ಷ್ಮೀಬಾಯಿ (28) ಕುರಿಗಳಿಗೆ ಮೇವು ತರಲು ಹೋಗಿದ್ಗರು. ಆಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ವಿನೋಬನಗರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿ ಐದು ನಿಮಿಷಗಳ ಕಾಲ ಮಳೆ ಬಂದಿದೆ. ಅದಕ್ಕೂ ಮುನ್ನ ಬೀಸಿದ ರಭಸದಿಂದ ಕೂಡಿದ ಗಾಳಿಗೆ ಕೆಲವೆಡೆ ಮರಗಳು ಉರುಳಿವೆ. ದುರ್ಗಿಗುಡಿ ಲೋಕೋಪಯೋಗಿ ಇಲಾಖೆ ಕಚೇರಿ ರಸ್ತೆಯಲ್ಲಿ ತೆಂಗಿನ ಮರ ಬಿದ್ದು ಎರಡು ಕಾರು ಜಖಂ ಆಗಿದೆ. ಸೋಮಿನಕೊಪ್ಪದಲ್ಲಿ ಮನೆಯೊಂದರ ಛಾವಣಿ ಹಾರಿ ಹೋಗಿದೆ.