ಹೊಸದಿಗಂತ ವರದಿ ಕೊಪ್ಪಳ:
ಭೂ ಸೇನಾ ನಿಗಮದ ಕಾರ್ಯನಿರ್ವಾಹಕ ಇಂಜಿನೀಯರ್ ಶರಣಪ್ಪ ಚಿಂಚೋಳಿಕರ್ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಅಪಾರ ಆಸ್ತಿ ಗಳಿಸಿದ ಆರೋಪದ ಮೇಲೆ ರಾಯಚೂರು ಲೋಕಾಯುಕ್ತ ಜಿಲ್ಲಾ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ದಾಳಿ ನಡೆಸಿದರು.
ಕೊಪ್ಪಳ, ಕಲಬುರಗಿ ಹಾಗು ಬೀದರಿನಲ್ಲಿಯೂ ಶರಣಪ್ಪ ಸಂಬಂಧಿಸಿದ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.