ಎರಡು ಮುಖ, ಮೂರು ಕಣ್ಣುಳ್ಳ ಮೇಕೆ ಮರಿ ಜನನ: ವಿಸ್ಮಯ ನೋಡಲು ಮುಗಿಬಿದ್ದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈ ಪ್ರಕೃತಿಯೇ ವಿಸ್ಮಯಗಳ ಆಗರ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೀಗೆ ಯಾರಿಗೂ, ಯಾವ ಕ್ಷೇತ್ರಕ್ಕೂ ನಿಲುಕದ ನಿಗೂಢಗಳು ಅದೆಷ್ಟೋ ಈ ಭೂಮಿಯ ಮೇಲೆ ನಡೆದಿವೆ, ನಡೆಯುತ್ತಲೇ ಇವೆ. ಇದೀಗ ಅಂತಹದ್ದೊಂದು ವಿಸ್ಮಯ ದೇವರ ನಾಡು ಕೇರಳದಲ್ಲಿ ನಡೆದಿದೆ. ಎರಡು ಮುಖ ಹಾಗೂ ಮೂರು ಕಣ್ಣುಗಳುಳ್ಳ ವಿಚಿತ್ರ ಮೇಕೆ ಮರಿಯೊಂದು ಜನಿಸಿದೆ.

ಈ ವಿಸ್ಮಯಕಾರಿ ಘಟನೆ ಕೇರಳದ ಕೆಲಕಂನ ಮನಯಪರಂಬು ಎಂಬಲ್ಲಿ ನಡೆದಿದೆ. ರಂಜಿತ್​ ಎಂಬುವರು ಮೇಕೆಯೊಂದನ್ನು ಸಾಕುತ್ತಿದ್ದು, ಅದಕ್ಕೆ ಹುಟ್ಟಿದ ಎರಡು ಮರಿಗಳಲ್ಲಿ ಒಂದು ಮರಿ ವಿಚಿತ್ರವಾಗಿ ಜನನವಾಗಿದೆ.

ತಲೆಯ ತೂಕ ಹೆಚ್ಚಿರುವ ಕಾರಣ ಮೇಕೆ ಮರಿಯು ನಿಲ್ಲಲು ಸಾಧ್ಯವಾಗುತ್ತಿಲ್ಲ. ಕುರಿಮರಿಯು ಎರಡೂ ಬಾಯಿಗಳನ್ನು ಬಳಸಿ ತಿನ್ನುವುದು ಮತ್ತು ಅಳುವುದು ಕಂಡುಬಂದಿದೆ. ಆದರೆ ಕುರಿಮರಿಗೆ ಹಾಲು ಕುಡಿಯಲು ಕಷ್ಟವಾಗುತ್ತಿದೆ ಎಂದು ಮಾಲೀಕ ರಂಜಿತ್ ಹೇಳಿದರು.

ಈ ವಿಸ್ಮಯಕಾರಿ ಕುರಿಮರಿಯನ್ನು ಕಣ್ತುಂಬಿಕೊಳ್ಳಲು ಪಕ್ಕದ ಊರಿನಿಂದ ಸಾಕಷ್ಟು ಮಂದಿ ರಂಜಿತ್​ ಅವರ ಮನೆಗೆ ಧಾವಿಸುತ್ತಿದ್ದು, ಮರಿಯನ್ನು ಕಂಡು ಹುಬ್ಬೇರಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!