ಡ್ರೈವಿಂಗ್ ಮಾಡುವಾಗಲೇ ಚಾಲಕನಿಗೆ ಹೃದಯಾಘಾತ, ಪೆಟ್ರೋಲ್ ಬಂಕ್‌ಗೆ ನುಗ್ಗಿದ ಬಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯಪುರದಲ್ಲಿ ಬಸ್ ಓಡಿಸುವಾಗಲೇ ಚಾಲಕನಿಗೆ ಹೃದಯಾಘಾತವಾಗಿದ್ದು, ಬಸ್‌ನಲ್ಲಿಯೇ ಮರಿಗೆಪ್ಪ ಅಥಣಿ ಮೃತಪಟ್ಟಿದ್ದಾರೆ.

ಕಲಬುರಗಿಯ ಅಫ್ಜಲಪುರದಿಂದ ಬಸ್ ವಿಜಯನಗರದ ಕಡೆಗೆ ಹೊರಟಿತ್ತು. ಈ ಸಮಯದಲ್ಲಿ ಬಸ್ ಹೆಡ್ ಲೈಟ್ ಸಮಸ್ಯೆ ಉಂಟಾಗಿದ್ದು, ಪ್ರಯಾಣಿಕರನ್ನು ಕೆಳಗೆ ಇಳಿಸಲಾಗಿದೆ, ನಂತರ ಬಸ್‌ನ್ನು ಡಿಪೋಗೆ ತೆಗೆದುಕೊಂಡು ಹೊರಟ ವೇಳೆ ಡ್ರೈವರ್ ಮರಿಗೆಪ್ಪ ಅವರಿಗೆ ಹೃದಯಾಘಾತವಾಗಿದ್ದು, ಬಸ್ ಪೆಟ್ರೋಲ್ ಬಂಕ್‌ಗೆ ನುಗ್ಗಿದೆ.

ತಕ್ಷಣವೇ ಕಂಡಕ್ಷರ್ ಶರಣು ಟಾಕಳಿ ಬಸ್ ಹಿಂದಿನ ಬ್ರೇಕ್ ಹಿಡಿದು ನಿಲ್ಲಿಸಿ ಅಪಘಾತವನ್ನು ತಪ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!