ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ನಲ್ಲಿ ಧೋನಿಪಡೆ ಚಾಂಪಿಯನ್ಸ್ ಎನಿಸಿಕೊಂಡಿದ್ದು, ತಂಡದ ಎಲ್ಲರೂ ಸೆಲೆಬ್ರೇಷನ್ ಮೂಡ್ನಲ್ಲಿದ್ದಾರೆ.
ಈ ಮಧ್ಯೆ ಸೀಸನ್ ಪೂರ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಪಿಎಲ್ ಸೀಸನ್ನ ಮೊದಲ ಪಂದ್ಯದಲ್ಲೇ ಮೊಣಕಾಲು ಗಾಯಕ್ಕೆ ತುತ್ತಾಗಿದ್ದ ಮಾಹಿ, ಸೀಸನ್ ಮುಗಿಯುವವರೆಗೂ ಫಸ್ಟ್ ಏಡ್ಗಳನ್ನು ಮಾಡಿಕೊಂಡೇ ಬಂದಿದ್ದರು.
ಮೊಣಕಾಲಿನ ಗಾಯದ ತೀವ್ರತೆ ತಿಳಿಯಲು ಸಾಕಷ್ಟು ಪರೀಕ್ಷೆಗಳನ್ನು ಮಾಡುತ್ತಿದ್ದು, ಶೀಘ್ರವೇ ಧೋನಿ ಗುಣಮುಖರಾಗಲಿದ್ದಾರೆ.