ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತೀ ವಾರ ವೀಕೆಂಡ್ ವಿತ್ ರಮೇಶ್‌ನಲ್ಲಿ ಯಾವ ಗೆಸ್ಟ್ ಬರ‍್ತಾರೆ ಅನ್ನೋದು ಕುತೂಹಲದ ವಿಷಯ.
ಈ ವಾರ ವೀಕೆಂಡ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬರ‍್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ, ಪ್ರತಿ ಬಾರಿ ಸಿನಿಮಾ, ಸಾಹಿತ್ಯ ಕ್ಷೇತ್ರದವರಿಗೆ ಹೆಚ್ಚಿನ ಮಣೆ ಹಾಕಲಾಗಿದ್ದು, ರಾಜಕೀಯದಿಂದಲೂ ಯಾರಾದರೂ ಬರಬೇಕು ಎನ್ನುವ ಕೂಗು ಕೇಳಿದೆ.
ಅಂತೆಯೇ ಡಿಕೆಶಿ ಈ ಬಾರಿ ಗೆಸ್ಟ್ ಆಗಿರಲಿದ್ದಾರೆ ಎನ್ನಲಾಗಿದೆ. ಪ್ರತೀ ವಾರ ಇಷ್ಟೊತ್ತಿಗಾಗಲೇ ಪ್ರೋಮೋ ರಿಲೀಸ್ ಆಗಿರುತ್ತದೆ. ಆದರೆ ಈವಾರದ ಗೆಸ್ಟ್ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಡಿಕೆಶಿ ಎಪಿಸೋಡ್ ಶೂಟ್ ಮುಗಿದಿದ್ದು, ಈ ವಾರ ಅವರೇ ಅತಿಥಿಯಾಗಿರಲಿದ್ದಾರೆ. ಜನರಲ್ಲಿ ಕುತೂಹಲ ಹೆಚ್ಚುಮಾಡಲು ಈ ರೀತಿ ಮಾಡಲಾಗಿದೆ ಎನ್ನುವ ಮಾಹಿತಿ ದೊರಕಿದೆ.