Saturday, December 20, 2025

ವಿಶ್ವದ ನಂಬರ್ 2 ಬೌಲರ್​​ನ ಕರೆತಂದ ಆರ್​ಸಿಬಿ, ಬೆಂಗಳೂರು ಟೀಂ ಫುಲ್‌ ಸ್ಟ್ರಾಂಗು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವೆಂಕಟೇಶ್ ಅಯ್ಯರ್ ಖರೀದಿ ಬೆನ್ನಲ್ಲೇ ಮತ್ತೊಬ್ಬ ಭರವಸೆಯ ಆಟಗಾರನ ಆರ್​ಸಿಬಿ ಖರೀದಿಸಿದೆ. ನ್ಯೂಜಿಲೆಂಡ್​ನ ಸ್ಟಾರ್ ಬೌಲರ್ ಜಾಕೋಬ್ ಡಫ್ಫಿಯನ್ನು ಆರ್​ಸಿಬಿ ಖರೀದಿಸಿದೆ. 

ಟಿ20 ಕ್ರಿಕೆಟ್​ನ ನಂಬರ್ 2 ಬೌಲರ್ ಆಗಿರುವ ಇವರು, ಮೂರು ಫಾರ್ಮ್ಯಾಟ್​ಗಳಲ್ಲೂ ನ್ಯೂಜಿಲೆಂಡ್ ಪರ ಆಡುತ್ತಿದ್ದಾರೆ. ಒಟ್ಟು 38 ಅಂತಾರಾಷ್ಟ್ರೀಯ ಟಿ-20 ಮ್ಯಾಚ್ ಆಡಿರುವ ಜಾಕೋಬ್, ಒಟ್ಟು 53 ವಿಕೆಟ್ ಕಿತ್ತಿದ್ದಾರೆ. 

ಜಾಕೋಬ್ ಬೇಸ್​ ಪ್ರೈಸ್ 2 ಕೋಟಿ ರೂಪಾಯಿ ಆಗಿತ್ತು. ಆರಂಭದಲ್ಲೇ ಆರ್​ಸಿಬಿ ಬಿಡ್ ಮಾಡಿ ಗೆದ್ದಿದೆ. ಹೇಜಲ್​ವುಡ್​ಗೆ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಆರ್​ಸಿಬಿಗೆ ಹೇಜಲ್​ವುಡ್ ಸ್ಥಾನ ತುಂಬುವ ಆಟಗಾರನೊಬ್ಬ ಬೇಕಾಗಿತ್ತು. ಇದೀಗ ಜಾಕೋಬ್​ ಅವರನ್ನು ಖರೀದಿಸುವ ಮೂಲಕ್, ಬೌಲಿಂಗ್ ವಿಭಾಗವನ್ನು ಮತ್ತಷ್ಟು ಸ್ಟ್ರಾಂಗ್ ಮಾಡಿಕೊಂಡಿದೆ. 

ಇನ್ನು, ಮತ್ತೊಬ್ಬ ಸ್ಟ್ರಾಂಗ್ ಬ್ಯಾಟರ್ ವೆಂಕಟೇಶ್ ಅಯ್ಯರ್ ಅವರನ್ನು ಆರ್​ಸಿಬಿ ಖರೀದಿಸಿದೆ. ವೆಂಕಟೇಶ್ ಅಯ್ಯರ್​ಗೆ 7 ಕೋಟಿ ನೀಡಿ, ಆರ್​ಸಿಬಿ ಖರೀದಿಸುವಲ್ಲಿ ಯಶಸ್ವಿಯಾಗಿದೆ. 

error: Content is protected !!