ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲ್ಕತ್ತಾದ ನೋವಾಪಾರಾ ಮೆಟ್ರೋ ನಿಲ್ದಾಣದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಮೆಟ್ರೋಗಾಗಿ ಕಾದು ನಿಂತಿದ್ದಾರೆ, ಇನ್ನೇನು ಒಂದೆರೆಡು ಸೆಕೆಂಡ್‌ಗಳಲ್ಲಿ ಮೆಟ್ರೋ ಬರಬೇಕು ಎನ್ನುವಾಗ ವ್ಯಕ್ತಿಯೊಬ್ಬ ಓಡಿ ಬಂದಿದ್ದು, ಮಹಿಳೆಯನ್ನು ಎಳೆದುಕೊಂಡ ಮೆಟ್ರೋ ಹಳಿ ಮೇಲೆ ಬಿದ್ದಿದ್ದಾನೆ.
ಇದನ್ನು ಕಂಡ ಜನರು ಜೋರಾಗಿ ಕೂಗಿ ಓಡಿಹೋಗಿದ್ದಾರೆ. ಈ ವ್ಯಕ್ತಿ ಯಾರೋ ಮಹಿಳೆಗೆ ಹೀಗೆ ಮಾಡಿಲ್ಲ, ಆಕೆ ಈತನ ಪತ್ನಿ ಎಂದು ಗುರುತಿಸಲಾಗಿದೆ. ಆತ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡಾಗಿ ಮಹಿಳೆ ಬಿಡಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಆದರೆ ಆತ ಬಲವಾಗಿ ಆಕೆಯನ್ನು ಎಳೆದು ತಾನೂ ಹಾರಿದ್ದು, ಇಬ್ಬರ ಮೇಲೆ ಮೆಟ್ರೋ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜನರಿಗೆ ಮೆಟ್ರೋ ಬಳಿ ಬರಲು ನಡುಕಹುಟ್ಟಿಸುವಂತಿದೆ ಎಂದಿದ್ದಾರೆ. ಈ ರೀತಿ ಆ ವ್ಯಕ್ತಿ ಮಾಡಿದ್ಯಾಕೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
https://twitter.com/Realchandan21/status/1665298643371294721?s=20