ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮುಂದುವರಿದಿದ್ದು, (Manipur violence) ಮಹಿಳೆ ಸೇರಿದಂತೆ ಕನಿಷ್ಠ ಮೂರು ಮಂದಿ ಬಲಿಯಾಗಿದ್ದಾರೆ.
ಶುಕ್ರವಾರ ಖೋಕೆನ್ ಗ್ರಾಮದಲ್ಲಿ ಶಂಕಿತ ಬಂಡುಕೋರರು ನಡೆಸಿದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಶಂಕಿತ ಉಗ್ರರು ಮತ್ತು ಸಂತ್ರಸ್ತರು ವಿವಿಧ ಸಮುದಾಯಗಳಿಗೆ ಸೇರಿದವರು ಎಂದು ಹೇಳಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ದಾಳಿಕೋರರು ಯೋಧರ ಸೋಗಿನಲ್ಲಿ ಬಂದಿದ್ದು, ಮಿಲಿಟರಿ ಬಳಸುವ ವಾಹನಗಳನ್ನು ಹೋಲುವ ವಾಹನಗಳನ್ನು ಚಲಾಯಿಸಿದ್ದರು. ಶುಕ್ರವಾರ ಮುಂಜಾನೆ ಖೋಕನ್ ಗ್ರಾಮಕ್ಕೆ ತೆರಳಿದ ಅವರು ತಮ್ಮ ಸ್ವಯಂಚಾಲಿತ ರೈಫಲ್‌ಗಳಿಂದ ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ್ದಾರೆ.
ಈ ಘಟನೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ ಶಾಂತಿ ಪ್ರಕ್ರಿಯೆಯನ್ನು ಉಲ್ಲಂಘಿಸಿದೆ. ದಂಗೆಕೋರರ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಅಧಿಕಾರಿಗಳಿಗೆ ಒತ್ತಾಯಿಸುತ್ತೇವೆ ಎಂದು ITLF ಹೇಳಿಕೆಯಲ್ಲಿ ತಿಳಿಸಿದೆ.
ಡೊಮ್ಖೋಹೋಯ್ ಎಂಬ ವ್ಯಕ್ತಿ ಮುಂಜಾನೆ ಪ್ರಾರ್ಥನೆಯಲ್ಲಿದ್ದಾಗ ಚರ್ಚ್‌ನೊಳಗೆ ಗುಂಡಿಗೆ ಬಲಿಯಾಗಿದ್ದಾರೆ ಎಂದು ITLF ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸೇನೆ ಮತ್ತು ಅರೆಸೇನಾ ಪಡೆಗಳ ಹೆಚ್ಚುವರಿ ನಿಯೋಜನೆ ಮಾಡಲಾಗಿದೆ.