ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ, ಶ್ರೀಲೀಲಾರಂತೆ ಕನ್ನಡದಿಂದ ನಮ್ಮ ಕನಕವತಿಯೂ ಬಾಲಿವುಡ್ ಹೋಗೋ ಸಮಯ ಸಮೀಪಿಸಿದೆ.
ರುಕ್ಮಿಣಿ ವಸಂತ್ ಹವಾ ಸದ್ಯ ದೇಶದೆಲ್ಲೆಡೆ ಇದೆ. ʻಕಾಂತಾರʼದ ಕನಕವತಿಯಾಗುವ ಮುನ್ನವೇ ತೆಲುಗು ಮತ್ತು ತಮಿಳು ಚಿತ್ರರಂಗ ಪ್ರವೇಶ ಮಾಡಿದ್ದ ರುಕ್ಮಿಣಿ ವಸಂತ್‌ಗೆ ಅಷ್ಟೇ ಡಿಮ್ಯಾಂಡ್ ಇದೆ. ಹೀಗಾಗಿ ಬಾಲಿವುಡ್ ಕೂಡ ಅವರನ್ನ ಕೈಬೀಸಿ ಕರೆಯುತ್ತಿದೆ.
ಇತ್ತೀಚೆಗೆ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರುಕ್ಮಿಣಿ ವಸಂತ್ ಹಿಂದಿ ಭಾಷೆಯ ಸಾಕಷ್ಟು ಆಫರ್‌ಗಳು ಬರ್ತಿರೋದಾಗಿ ಹೇಳಿದ್ದಾರೆ. ಶೀಘ್ರದಲ್ಲೇ ಹಲವು ವಿಭಿನ್ನ ಪ್ರಾಜೆಕ್ಟ್‌ಗಳು ಘೋಷಣೆಯಾಗೋದಾಗಿ ತಿಳಿಸಿದ್ದಾರೆ. ಹಿಂದಿ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗುತ್ತಿರುವ ರುಕ್ಮಿಣಿ ಅಲ್ಲಿಯೇ ದಿನನಿತ್ಯ ಕಾಣಿಸ್ಕೊಳ್ಳುತ್ತಿದ್ದಾರೆ. ನಿತ್ಯ ಹೊಸ ಸಿನಿಮಾಗಳ ಕಥೆ ಕೇಳ್ತಿರುವ ರುಕ್ಮಿಣಿ ಹೊಸ ಫೋಟೋಶೂಟ್‌ಗಳಲ್ಲಿ ಮಿಂಚುತ್ತಿದ್ದಾರೆ. ರುಕ್ಮಿಣಿ ಈ ಬದಲಾವಣೆಗಳನ್ನ ಗಮನಸಿದ್ರೆ ಸದ್ಯಕ್ಕಂತೂ ಅವರು ಸ್ಯಾಂಡಲ್‌ವುಡ್ ಕಡೆ ಮುಖ ಮಾಡುವ ಸಾಧ್ಯತೆ ಕಡಿಮೆ ಅಂತ ಹೇಳಲಾಗ್ತಿದೆ.
CINE | ರಶ್ಮಿಕಾ, ಶ್ರೀಲೀಲಾ ಹಾದಿಯಲ್ಲಿ ರುಕ್ಮಿಣಿ ವಸಂತ್? ಬಾಲಿವುಡ್‌ನಿಂದ ಬುಲಾವ್

