HEALTH| ಚಿಟಿಕಿ ಅರಶಿನ ಸೇರಿಸಿದರೆ ಇಷ್ಟೆಲ್ಲಾ ಲಾಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾಲು ಒಂದು ಪೂರ್ಣಾಹಾರ. ಹಾಲಿನಿಂದ ಅನೇಕ ಪ್ರಯೋಜನಗಳಿವೆ. ಅನೇಕ ರೋಗಗಳಿಗೆ ಹಾಲು ದಿವ್ಯೌಷಧಿಯೂ ಹೌದು. ಇದೇ ಹಾಲಿಗೆ ಒಂದು ಚಿಟಿಕಿ ಅರಶಿನ ಸೇರಿಸಿದರಂತೂ ಅದು ಅದ್ಭುತ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಹಸುವಿನ ಹಾಲನ್ನು ಹೈನುಗಾರಿಕೆಯ ಉತ್ಪನ್ನಗಳಾದ ಕೆನೆ, ಬೆಣ್ಣೆ, ಮೊಸರು, ಐಸ್ ಕ್ರೀಮ್ ಮತ್ತು ಗಿಣ್ಣುಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಇವಲ್ಲದೆ ಹಾಲಿನ ಪುಡಿ, ಸಾಂದ್ರ ಹಾಲುಗಳ ತಯಾರಿಕೆಯಲ್ಲಿಯೂ ಹಸುವಿನ ಹಾಲನ್ನು ಉಪಯೋಗಿಸುವರು. ಪ್ರಾಣಿ ಜಗತ್ತಿನಲ್ಲಿ ಮಾನವನು ಮಾತ್ರ ಶೈಶವಾವಸ್ಥೆಯನ್ನು ದಾಟಿದ ಮೇಲೆ ಸಹ ಹಾಲನ್ನು ಬಳಸುವುದು ರೂಢಿಯಾಗಿದೆ. ದೇಹವನ್ನು ಸದೃಢವಾಗಿಸಲು, ಆರೋಗ್ಯಕರವಾಗಿಡಲು ಹಾಲು ಸೇವಿಸುತ್ತಾರೆ. ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವ ಅಭ್ಯಾಸ ಅನೇಕರಿಗೆ ಇದೆ.  ಅರಶಿನಯುಕ್ತ ಹಾಲಿನಿಂದಾಗುವ ಪ್ರಯೋಜನಗಳು ಏನೇನು ನೋಡೋಣ ಬನ್ನಿ.

ದೇಸೀ ದನದ ಒಂದು ಲೋಟ ಹಾಲಿಗೆ ಚಿಟಿಕೆ ಅರಶಿನ ಸೇರಿಸಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ನಿಯಮಿತವಾಗಿ ಇದರ ಸೇವನೆಯಿಂದ ದೇಹ ಸದೃಢಗೊಳ್ಳುವ ಜೊತೆಗೆ ಹೃದಯದ ಆರೋಗ್ಯ ಉತ್ತಮವಾಗುತ್ತದೆ. ಅರಶಿನಯುಕ್ತ ಹಾಲು ಸೇವನೆಯಿಂದ ಕೀಲು ನೋವುಗಳು ಮಾಯವಾಗುತ್ತವೆ. ನೆನಪಿನ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ. ಮೆದುಳಿನ ಬೆಳವಣಿಗೆಗೂ ಇದು ಸಹಕಾರಿ. ಮೂಳೆಗಳು ಬಲವಾಗಿ ದೇಹದ ಆಯಾಸವನ್ನು ಕಡಿಮೆಮಾಡಿ ಕ್ರಿಯಾಶೀಲರನ್ನಾಗಿಸುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ಆರೋಗ್ಯವಂತ ಜೀವನಕ್ಕೆ ಸಹಕಾರಿಯಾಗಿಸುತ್ತದೆ. ಅರಶಿನ ಬಳಸುವುದರಿಂದಾಗಿ ಆಂಟಿವೈರಲ್‌ ಗುಣಗಳು ವೃದ್ಧಿಯಾಗುತ್ತವೆ. ಹೊಟ್ಟೆಯಲ್ಲಿ ಜೀರ್ಣಾಂಗ ವ್ಯವಸ್ಥೆ ಹೆಚ್ಚಿಸಲು ಇದು ಸಹಕಾರಿಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!