ಹೊಸದಿಂಗತ ಡಿಜಿಟಲ್ ಡೆಸ್ಕ್:
ಕಳೆದ ವರ್ಷಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ನಟಿ ಗೆಹನಾ ವಸಿಷ್ಠ (Gehana Vasisth) , ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ ಕೇಸ್ನಲ್ಲಿ ಸಿಕ್ಕಿಬಿದ್ದ ಸಂದರ್ಭದಲ್ಲಿ ಹೆಸರು ಥಳಕು ಹಾಕಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ನಟಿ ಗೆಹನಾ ಅಲಿಯಾಸ್ ವಂದನಾ ತಿವಾರಿ ಅವರ ಮೇಲಿತ್ತು. ಬಳಿಕ ಸೈಲೆಂಟ್ ಆಗಿದ್ದ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ಅದೇನೇದರೆ ಗೆಹನಾ ವಸಿಷ್ಠ (Gehana Vasistha) ತಮ್ಮ ಬಹುಕಾಲದ ಗೆಳೆಯ ಫೈಜನ್ ಅನ್ಸಾರಿಯನ್ನು ಮದುವೆಯಾಗಿದ್ದಾರೆ (Marriage). ಪ್ರಿಯಕರನ ಮದುವೆಯಾದ ನಂತರ ಅವರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೊಂದು ಅಂತರ್ ಧರ್ಮೀಯ ವಿವಾಹವಾಗಿದ್ದು, ಮದುವೆ ಕಾರಣದಿಂದಾಗಿ ಮತಾಂತರವಾಗಿಲ್ಲ (Conversion) ಎಂದು ಹೇಳಲಾಗುತ್ತಿದೆ.
ಮುಸ್ಲಿಂ (Muslim) ಸಂಪ್ರದಾಯದಲ್ಲೇ ಮದುವೆಯಾಗಿದ್ದು, ಅವರ ನಿಖಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿವೆ. ಫೈಜನ್ ಅನ್ಸಾರಿ (Faizan Ansari) ಮತ್ತು ಗೆಹನಾ ವಸಿಷ್ಠ ಬಹುಕಾಲದಿಂದ ಡೇಟಿಂಗ್ ಮಾಡುತ್ತಿದ್ದರು. ಇದೀಗ ನಿಖಾ ಆಗುವ ಮೂಲಕ ಸತಿಪತಿಯಾಗಿದ್ದಾರೆ. ಹೊಸ ಜೀವನಕ್ಕೆ ಕಾಲಿಟಿದ್ದಾರೆ.
ಫೈಜನ್ ಮತ್ತು ಗೆಹನಾ ಇಬ್ಬರೂ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ಅಲ್ಲಿಂದಲೇ ಇಬ್ಬರೂ ಪ್ರೀತಿಸೋಕೆ ಶುರು ಮಾಡಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರೂ ಸೋಷಿಯಲ್ ಮೀಡಿಯಾದ ಇನ್ ಫ್ಲೂಯನ್ಸ್ ಕೂಡ ಆಗಿದ್ದಾರೆ. ಈ ಕೆಲಸವೇ ಇಬ್ಬರನ್ನೂ ಒಂದಾಗುವಂತೆ ಮಾಡಿದೆ
ಮಧ್ಯ ಪ್ರದೇಶ ಮೂಲದ ಗೆಹನಾ ಖಾಸಗಿ ವಾಹಿನಿಯ ನಿರೂಪಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ತದನಂತರ ಮಾಡೆಲ್ ಲೋಕದಲ್ಲಿ ಗುರುತಿಸಿಕೊಂಡ ಗೆಹಾನ ಸುಮಾರು 80 ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಲೋಕಕ್ಕೆ ಬಂದ ಬಳಿಕ ವಂದನಾ ಹೆಸರನ್ನ ಗೆಹನಾ ಆಗಿ ಬದಲಿಸಿಕೊಂಡಿದ್ದರು.
ಹಲವು ಸಿನಿಮಾಗಳಲ್ಲಿ ಗೆಹಾನ ಕಾಣಿಸಿಕೊಂಡಿದ್ದು ತಮ್ಮ ಹಾಟ್ ಮೂವ್ ಗಳಿಂದಲೇ ಹೆಚ್ಚು ಸದ್ದು ಮಾಡಿದ್ದಾರೆ. ಇನ್ನೂ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಗೆಹನಾ ಕೆಲ ದಿನಗಳ ಹಿಂದೆ ಬೀಚ್ ಬಳಿ ಬಿಕಿನಿ ತೊಟ್ಟು ಪೋಸ್ ನೀಡಿದ್ದರು.