ಹೊಸದಿಗಂತ ಡಿಜಿಟಲ್ ಡೆಸ್ಕ್:
ರೀಲ್ಸ್‌ಗಾಗಿ ಜನ ಏನು ಬೇಕಾದರೂ ಮಾಡುತ್ತಾರೆ. ಅಂಥದ್ದರಲ್ಲಿ ಕಾನೂನು ಉಲ್ಲಂಘಿಸುವುದು ದೊಡ್ಡ ವಿಷಯವೇನಲ್ಲ. ಇತ್ತೀಚೆಗಷ್ಟೇ ವಧು ಕಾರಿನ ಮೇಲೆ ಕುಳಿತು ಮದುವೆ ಸ್ಥಳಕ್ಕೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಅಂಥದ್ದೇ ಮತ್ತೊಂದು ವಿಡಿಯೋ ಸದ್ದು ಮಾಡುತ್ತಿದೆ.
ಮದುವೆಯ ಡ್ರೆಸ್ ಮತ್ತು ಆಭರಣಗಳಲ್ಲಿ ವಧು ಹೆಲ್ಮೆಟ್ ಇಲ್ಲದೆ ಸ್ಕೂಟರ್ ಓಡಿಸಿದ್ದಾಳೆ. ಈ ವಿಡಿಯೋ ದೆಹಲಿ ಪೊಲೀಸರಿಗೆ ತಲುಪಿದ್ದು, ಪೊಲೀಸರು ಹೀಗೆ ಪ್ರತಿಕ್ರಿಯಿಸಿದ್ದಾರೆ. ‘ರೀಲ್‌ಗಳಿಗಾಗಿ ನಿಮ್ಮ ಜೀವವನ್ನು ತ್ಯಾಗ ಮಾಡಬೇಡಿ..ದಯಮಾಡಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಮೂರ್ಖತನದ ಕೆಲಸಗಳನ್ನು ಮಾಡಬೇಡಿ’ ಎಂಬ ಶೀರ್ಷಿಕೆಯೊಂದಿಗೆ ಅವರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಹೆಲ್ಮೆಟ್ ಮತ್ತು ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸಿದ್ದಕ್ಕಾಗಿ ವಧುವಿನ ಹೆಸರಿನಲ್ಲಿ ಪೊಲೀಸರು ದಂಡ ನೀಡಿರುವ ದೃಶ್ಯ ವಿಡಿಯೋದಲ್ಲಿದೆ. ಈ ವಿಡಿಯೋ ವೈರಲ್ ಆಗುತ್ತಿದೆ.
ಪದೇ ಪದೇ ಇಂತಹ ಕೆಲಸಗಳನ್ನು ಮಾಡುತ್ತಿದ್ದರೆ ಸಂಬಂಧಪಟ್ಟ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ದಂಡ ವಿಧಿಸುವ ಬದಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಹಲವರು ಈ ಸಂದರ್ಭದಲ್ಲಿ ಪೊಲೀಸರಿಗೆ ಮನವಿ ಮಾಡಿದರು.