ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಅತಿಥಿ ದೇವೋಭವ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಸ್ಥಳೀಯ ವರ್ತಕ, ಪ್ರವಾಸಕ್ಕೆಂದು ಬಂದ ವಿದೇಶಿ ಪ್ರಜೆಗೆ ಕಿರುಕುಳ ನೀಡಿದ್ದಾನೆ. ಇದರಿಂದ ಭೀತಿಗೊಳಗಾದ ವಿದೇಶಿಗ, ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ನೆದರ್ ಲ್ಯಾಂಡ್ ದೇಶದ ಪ್ರಜೆ ಪೆಡ್ರೋ ಮೊಟಾ ಎಂಬುವವರು, ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಚಿಕ್ಕಪೇಟೆಯ ಮಾರುಕಟ್ಟೆಯನ್ನು ವಿಡಿಯೋ ಮಾಡಿಕೊಂಡು ಸುತ್ತಾಡುತ್ತಾ ಸ್ಥಳಾನ್ವೇಶನೆ ಮಾಡುತ್ತಿದ್ದರು. ಈ ಸಂದರ್ಭ ಸ್ಥಳೀಯ ವರ್ತಕ ಪೆಡ್ರೋರನ್ನು ಎಳೆದಾಡಿ ಕಿರುಕುಳ ನೀಡಿದ್ದಾನೆ.
ಪೆಡ್ರೋ ಮೊಟಾ ಯೂಟ್ಯೂಬರ್ ಕೂಡ ಆಗಿದ್ದು, ಈ ವಿಡಿಯೋ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಅವರು ಅದನ್ನು ತಮ್ಮ ಚ್ಯಾನಲ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಚಿಕ್ಕಪೇಟೆಯಲ್ಲಿ ನಡೆದ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ತಕ್ಷಣ ಪ್ರಕರಣವನ್ನು ಡಿಸಿಪಿ ಗಮನಕ್ಕೆ ಸ್ಥಳೀಯರು ತಂದಿದ್ದಾರೆ.
ಮಾಹಿತಿ ಪಡೆದ ಪಶ್ಚಿಮ ವಿಭಾಗದ ಪೊಲೀಸರು ವಿಡಿಯೋದಲ್ಲಿ ಕಿರುಕುಳ ನೀಡಿರುವ ನವಾಬ್ ಶರೀಫ್ ಹಯಾತ್ ಎಂಬ ಆರೋಪಿಯನ್ನು ಬಂಧಿಸಿದ್ದು Sumoto ಪ್ರಕಣ ದಾಖಲಿಸಿದ್ದಾರೆ.
https://twitter.com/BlrCityPolice/status/1668155567163191296?s=20