ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಕಿರುತೆರೆಯ ಖ್ಯಾತ ನಟಿ, ಹಿಂದಿಯ ಬಿಗ್ ಬಾಸ್ ವಿನ್ನರ್ ರುಬೀನಾ ದಿಲೈಕ್ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ರುಬೀನಾಗೆ ತೀವ್ರ ಗಾಯಗಳಾಗಿವೆ. ಬೆನ್ನಿಗೆ ಮತ್ತು ತಲೆಗೆ ಪೆಟ್ಟು ಬಿದ್ದು ಕಾರಣದಿಂದಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದ ರುಬೀನಾ ಕಾರಿಗೆ, ಹಿಂದಿನಿಂದ ಬಂದ ಟಾಟಾ ಯೋಧ ಟ್ರಕ್ ಗುದ್ದಿದೆ. ಪರಿಣಾಮ ರುಬೀನಾ ಅವರ ಬೆನ್ನು ಮತ್ತು ತೆಲೆಗೆ ಪೆಟ್ಟುಬಿದ್ದಿದೆ. ಫೋನ್ ನಲ್ಲಿ ಮಾತನಾಡುತ್ತಾ ಟ್ರಕ್ ಓಡಿಸುತ್ತಿದ್ದ ವ್ಯಕ್ತಿಯಿಂದಾಗಿ ರುಬೀನಾ ಆಸ್ಪತ್ರೆ ಸೇರಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ .
ಈ ಬಗ್ಗೆ ರಿಬೀನಾ ಪತಿ, ನಟ ಅಭಿನವ್ ಶುಕ್ಲಾ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ರುಬೀನಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಆದ ಘಟನೆಯನ್ನು ಹಂಚಿಕೊಂಡಿದ್ದಾರೆ. ಅಪಘಾತವಾದಾಗ ನಾನಾ ಆಘಾತಕ್ಕೊಳಗಾಗಿದ್ದೆ. ವೈದ್ಯಕೀಯ ಪರೀಕ್ಷೆಗಳ ನಂತರ ನಿರಾಳಳಾಗಿದ್ದೇನೆ. ಜಾಗರೂಕತೆಯನ್ನು ವಾಹನ ಚಲಾಯಿಸಿ. ರಸ್ತೆ ನಿಯಮಗಳನ್ನು ದಯವಿಟ್ಟು ಪಾಲಿಸಿ’ ಎಂದು ಅವರು ಮನವಿ ಮಾಡಿದ್ದಾರೆ.
ಇನ್ನು ಪತಿ ಅಭಿನವ್ ಪ್ರತಿಕ್ರಿಯೆ ನೀಡಿ, ‘ಇಂದು ನಮಗೆ ಸಂಭವಿಸಿದೆ. ನಿಮಗೂ ಸಂಭಿವಸಬಹುದು. ಫೋನ್ ಹಿಡಿದು ಟ್ರಾಫಿಕ್ ಜಂಪ್ ಮಾಡುವ ಈಡಿಯಟ್ಸ್ ಬಗ್ಗೆ ಎಚ್ಚರದಿಂದಿರಿ. ಆತ ನಗುತ್ತಾ ನಿಂತಿದ್ದ. ರುಬೀನಾ ಕಾರಿನಲ್ಲಿ ಇದ್ದಳು. ಸದ್ಯ ಆರೋಗ್ಯವಾಗಿ ಇದ್ದಾಳೆ. ಅವಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದೆ. ಆ ಚಾಲಕನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿಮ್ಮನ್ನು ವಿನಂತಿಸುತ್ತೇನೆ’ ಎಂದು ಮುಂಬೈ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಮುಂಬೈ ಪೊಲೀಸರು ಅಭಿನವ್ ಶುಕ್ಲಾ ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ್ದಾರೆ. ‘ಘಟನೆ ನಡೆದ ಸ್ಥಳದ ಹತ್ತಿರದ ಪೊಲೀಸ್ ಠಾಣೆಗೆ ಘಟನೆಯನ್ನು ವರದಿ ಮಾಡಿ’ ಎಂದು ಹೇಳಿದ್ದಾರೆ.