ದಿನಭವಿಷ್ಯ| ಹೊಸ ಉದ್ಯೋಗದ ಆಕರ್ಷಣೆ ನಿಮಗೆ ಉಂಟಾದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನೀವಿಂದು ಪ್ರಮುಖ ನಿರ್ಧಾರ ತಾಳಬೇಕಾದ ಅನಿವಾರ್ಯತೆ. ನಿಮ್ಮ ಮನಸ್ಸನ್ನು ಮುಕ್ತವಾಗಿ ತೆರೆದಿಡಲು ಹಿಂಜರಿಯಬೇಡಿ. ಅದರಿಂದ ನಿರಾಳತೆ.

ವೃಷಭ
ಸಂಘಟಿತ ಕಾರ್ಯ ದಿಂದ ಯಶಸ್ಸು. ಏಕಾಂಗಿಯಾಗಿ ಸಾಧಿಸಬಲ್ಲೆ ಎಂದು ಹೊರಟರೆ ಕಷ್ಟ ಪಡುವಿರಿ. ಅಹಂ ತೊರೆಯಿರಿ.

ಮಿಥುನ
ಹೊಸ ಉದ್ಯೋಗದ ಆಕರ್ಷಣೆ ನಿಮಗೆ ಉಂಟಾದೀತು. ಆದರೆ ಎಲ್ಲವನ್ನು ಪರಾಮರ್ಶಿಸಿ ಮುಂದುವರಿಯಿರಿ. ದುಡುಕಿನ ನಿರ್ಧಾರ ಒಳ್ಳೆಯದಲ್ಲ.

ಕಟಕ
ಸಂಬಂಧವು ಸುಲಲಿತವಾಗಿ ಮುಂದುವರಿಯಲು ನೀವು ತಾಳ್ಮೆ ಮತ್ತು ಅನುಕಂಪದಿಂದ ವ್ಯವಹರಿಸುವುದು ಅಗತ್ಯವಾಗಿದೆ.

ಸಿಂಹ
ಹಿಡಿದ ಕಾರ್ಯ ಮೊದಲು ಪೂರೈಸಿ. ಆಮೇಲೆ ಹೊಸತಕ್ಕೆ ಹೊರಡಿ. ನಿಮ್ಮದಲ್ಲದ ಕಾರ್ಯದಲ್ಲಿ ಮೂಗು ತೂರಿಸಲು ಹೋಗಬೇಡಿ.

ಕನ್ಯಾ
ಹಣಕಾಸು ಸಮಸ್ಯೆ ಬಾಧಿಸದು. ಆದರೂ ನಿಮ್ಮ ಖರ್ಚಿನ ಮೇಲೆ ನಿಗಾ ಇಡಬೇಕು. ಭಿನ್ನಾಭಿಪ್ರಾಯ ಉಂಟಾದಾಗ ವಾದ ಮಾಡಲು ಹೋಗಬೇಡಿ.

ತುಲಾ
ನಿಮ್ಮ ಬಹುಕಾಲದ ಆಕಾಂಕ್ಷೆ ಈಡೇರುವುದು. ಎಲ್ಲರೊಂದಿಗೆಬೆರೆತು ಬಾಳುವುದು ಕಲಿಯಿರಿ. ಆರೋಗ್ಯಕ್ಕೆ ಪೂರಕ ಆಹಾರ ಮಾತ್ರ ಸೇವಿಸಿ.

ವೃಶ್ಚಿಕ
ನಿಮ್ಮ ಕೆಲಸ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಈ ಕುರಿತು ಯಾವುದೇ ಅನುಮಾನ ಇದ್ದರೆ ಅದನ್ನು ಬಿಟ್ಟುಬಿಡಿ. ವಿವಾಹಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ.

ಧನು
ಬಿಡುವಿಲ್ಲದ ದಿನ. ನಿಮ್ಮ ಕಾರ್ಯ ಪೂರೈಸಲು ತುಸು ಶ್ರಮ ಪಡಬೇಕಾಗುವುದು. ಕೌಟುಂಬಿಕ ಸಹಕಾರ ನಿಮಗಿದೆ. ಆಹಾರದಲ್ಲಿ ಎಚ್ಚರವಿಡಿ.

ಮಕರ
ನಿರೀಕ್ಷೆ ಈಡೇರದು. ನಿರಾಶೆ ಉಂಟಾಗುವುದು. ನಿಮ್ಮ ಖಾಸಗಿ ಬದುಕಿನ ಬಗ್ಗೆ ಇತರರಲ್ಲಿ ಹೇಳಿಕೊಳ್ಳಬೇಡಿ. ಈ ವಿಚಾರದಲ್ಲಿ ಖಾಸಗಿತನ ಒಳ್ಳೆಯದು.

ಕುಂಭ
ನಿಮ್ಮ ಕಾರ್ಯಕ್ಕೆ ಶ್ಲಾಘನೆ ದೊರಕುವುದು. ಕುಟುಂಬಸ್ಥರ ಜತೆ ಹೆಚ್ಚು ಸಮಯ ಕಳೆಯುವ ಅವಕಾಶ. ಇಂದಿನ ಮಟ್ಟಿಗೆ ವೃತ್ತಿ ಒತ್ತಡ ಮರೆತು ಮರೆಯಿರಿ.

ಮೀನ
ನಿಮಗೆ ಎದುರಾಗಿದ್ದ ಅಡ್ಡಿಗಳು ಒಂದೊಂದಾಗಿ ನಿವಾರಣೆ ಆಗುವವು. ಕುಟುಂಬದಲ್ಲೂ ಸಾಮರಸ್ಯದ ವಾತಾವರಣ. ಧನಲಾಭ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here