CRIME| ಸ್ಕ್ರೂ ಡ್ರೈವರ್‌ನಿಂದ ಕಣ್ಣಿಗೆ ಇರಿದು ನರ್ಸಿಂಗ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಕಾರಾಬಾದ್‌ನಲ್ಲಿ ನಡೆದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳ ಬರ್ಬರ ಹತ್ಯೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಸ್ಕ್ರೂ ಡ್ರೈವರ್‌ನಿಂದ ಕಣ್ಣಿಗೆ ಇರಿದು ಬ್ಲೇಡ್‌ನಿಂದ ಕತ್ತು ಕುಯ್ದು ಕೊಲೆ ಮಾಡಿದ್ದಾರೆ. ಈ ಹತ್ಯೆಯು ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಸಿಡಿದೆದ್ದಿದೆ.

ವಿಕಾರಾಬಾದ್ ಜಿಲ್ಲೆಯ ಪರಿಗಿ ಮಂಡಲದ ಕಂಡ್ಲಾಪುರ ಗ್ರಾಮದಲ್ಲಿ 19 ವರ್ಷದ ಯುವತಿಯೊಬ್ಬಳ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ಪ್ರತಿಕ್ರಿಯೆ ನೀಡಿದೆ. ಸ್ಕ್ರೂ ಡ್ರೈವರ್‌ನಿಂದ ಆಕೆಯ ಕಣ್ಣಿಗೆ ಇರಿದು ಬ್ಲೇಡ್‌ನಿಂದ ಕತ್ತು ಕುಯ್ದು ಕೆರೆಗೆ ಎಸೆದ ಘಟನೆಯ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಈ ಕೊಲೆ ಪ್ರಕರಣವನ್ನು ಸುಮೋಟೋ ತೆಗೆದುಕೊಂಡಿದೆ. ತೆಲಂಗಾಣ ರಾಜ್ಯದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಯ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಕಳವಳ ವ್ಯಕ್ತಪಡಿಸಿದೆ.

ಆರೋಪಿಯನ್ನು ಆದಷ್ಟು ಬೇಗ ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ತೆಲಂಗಾಣ ಡಿಜಿಪಿಗೆ ಪತ್ರ ಬರೆದಿದೆ. ಎನ್‌ಸಿಡಬ್ಲ್ಯು ಯುವತಿಯ ಕೊಲೆ ಘಟನೆಯ ಬಗ್ಗೆ ಕಾಲಮಿತಿಯ ತನಿಖೆಗೆ ಒತ್ತಾಯಿಸಿದೆ. ಕಾನೂನಿನ ಪ್ರಕಾರ ಎಫ್‌ಐಆರ್ ಸಲ್ಲಿಸಿ ಅಲ್ಲದೆ, ಇದುವರೆಗೆ ಕೈಗೊಂಡಿರುವ ಕ್ರಮಗಳ ಕುರಿತು 3 ದಿನಗಳಲ್ಲಿ ವರದಿ ಸಲ್ಲಿಸುವಂತೆ ತೆಲಂಗಾಣ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚಿಸಿದೆ.

ಏನಿದು ಘಟನೆ?
ವಿಕಾರಾಬಾದ್ ಜಿಲ್ಲೆಯ ಪರಿಗಿ ಮಂಡಲದ ಕಂಡ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಶಿರೀಷಾ (19) ವಿಕಾರಾಬಾದ್‌ನ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ತರಬೇತಿ ಪಡೆಯುತ್ತಿದ್ದಾರೆ. ಜೂ.10ರ ಮಧ್ಯರಾತ್ರಿಯವರೆಗೂ ಮನೆಯಲ್ಲಿದ್ದ ಸಿರೀಶಾ ಬೆಳ್ಳಂಬೆಳಗ್ಗೆ ಮನೆಯಲ್ಲಿ ಪತ್ತೆಯಾಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಇಡೀ ಗ್ರಾಮದಲ್ಲಿ ಹುಡುಕಾಟ ನಡೆಸಿದರೂ ಶಿರೀಷಾ ಎಲ್ಲಿಯೂ ಪತ್ತೆಯಾಗಿಲ್ಲ.

ಮಧ್ಯಾಹ್ನ ಗ್ರಾಮದ ಹೊರವಲಯದಲ್ಲಿರುವ ನೀರಿನ ಟ್ಯಾಂಕ್ ಬಳಿ ಸಿರೀಶಾ ಅವರ ಡ್ರೆಸ್ ಕಾಣಿಸಿಕೊಂಡಿತ್ತು. ಕೆರೆಯಲ್ಲಿ ಅವರ ಮೃತದೇಹ ತೇಲುತ್ತಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಶವ ಹೊರತೆಗೆದಿದ್ದಾರೆ. ಮೃತದೇಹ ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಕ್ರೂ ಡ್ರೈವರ್‌ನಂತಹ ಹರಿತವಾದ ವಸ್ತುವಿನಿಂದ ಸಿರೀಶಾ ಎರಡೂ ಕಣ್ಣುಗಳಿಗೆ ಇರಿದಿದ್ದಾರೆ. ಮತ್ತೊಂದು ಹರಿತವಾದ ವಸ್ತುವಿನಿಂದ ಗಂಟಲು ಕತ್ತರಿಸಿದ್ದು, ತಲೆಯ ಮೇಲೆ ಗಾಯಗಳಾಗಿವೆ.

ಶಿರಿಷಾರನ್ನು ಇಷ್ಟು ಭೀಕರವಾಗಿ ಕೊಲ್ಲಲು ಕಾರಣವೇನು? ಕೊಂದವರು ಯಾರು? ಪೊಲೀಸರು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!