ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಟೈನರ್ ಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಪ್ರವೀಣ್ ಕುಮಾರ್ ಭೋಜಪ್ಪ (27), ಸುರೇಶ್ ಈರಸಂಗಪ್ಪ ಹಂಡರಗಲ್ (43) ಹಾಗೂ ಗೌರಮ್ಮ ಹನುಮಗೌಡ ಕನ್ನೂರು (60) ಮೃತರು. ಮೃತರು ಮೂದ್ದೇಬಿಹಾಳ ಮೂಲದವರಾಗಿದ್ದಾರೆ.
ನಿಂತಿದ್ದ ಕಂಟೈನರ್ ಗೆ ಕಾರು ಡಿಕ್ಕಿಯಾಗಿ ಈ ಭೀಕರ ಅಪಘಾತ ಸಂಭವಿಸಿದೆ. ಮೃತ ದೇಹಗಳನ್ನು ಕುಷ್ಟಗಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಕುಷ್ಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.