ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಟರ್ಕಾಂಟಿನೆಂಟರ್ ಕಪ್ ಟೂರ್ನಿಯಲ್ಲಿ ಭಾರತ ಫುಟ್ಬಾಲ್ ತಂಡ ವಾನವಾಟು ಎದುರಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಈ ವೇಳೆ ನಾಯಕ ಸುನಿಲ್ ಚೆಟ್ರಿಗೆಲುವಿನ ಗೋಲು ಬಾರಿಸುವ ಮೂಲಕ ತಮ್ಮ ಪತ್ನಿ ಗರ್ಭಿಣಿಯಾಗಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಜೂನ್ 12ರಂದು ಭಾರತ ಹಾಗೂ ವಾನವಾಟು ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಸುನಿಲ್ ಚೆಟ್ರಿ, ಅದ್ಭುತ ಕಾಲ್ಚಳಕದ ಮೂಲಕ ಮೂಲಕ ಪಂದ್ಯದ 81ನೇ ನಿಮಿಷದಲ್ಲಿ ಆಕರ್ಷಕ ಗೋಲು ಬಾರಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಬಳಿಕ ಗೋಲು ಪಟ್ಟಿ ಸೇರಿದ ಚೆಂಡನ್ನು ಹಿಡಿದುಕೊಂಡ ಚೆಟ್ರಿ, ಜರ್ಸಿಯ ಒಳಗಡೆ ಹೊಟ್ಟೆಯ ಭಾಗದಲ್ಲಿ ಹಾಕಿಕೊಂಡು ಭಾವನಾತ್ಮಕವಾಗಿ ತಮ್ಮ ಪತ್ನಿ ಗರ್ಭಿಣಿಯಾಗಿರುವ ಸಿಹಿ ಸುದ್ದಿಯನ್ನು ಫುಟ್ಬಾಲ್ ಜಗತ್ತಿಗೆ ಅನಾವರಣ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ.
https://twitter.com/IndianFootball/status/1668292006328823808?ref_src=twsrc%5Etfw%7Ctwcamp%5Etweetembed%7Ctwterm%5E1668292006328823808%7Ctwgr%5E8cb797048e0f65f04ee1c7ebc30072a35cc8cad7%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FIndianFootball%2Fstatus%2F1668292006328823808%3Fref_src%3Dtwsrc5Etfw
ಇನ್ನು ಈ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಸುನಿಲ್ ಚೆಟ್ರಿ, “ನಾನು ಹಾಗೂ ನನ್ನ ಪತ್ನಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಈ ವಿಚಾರವನ್ನು ಇಡೀ ಜಗತ್ತಿಗೆ ಈ ರೀತಿ ವಿಷಯ ಮುಟ್ಟಿಸಿದ್ದೇನೆ” ಎಂದು ಹೇಳಿದ್ದಾರೆ.
ಫೈನಲ್ಗೇರಿದ ಭಾರತ:
ಭಾರತ ತಂಡದ ಅನುಭವಿ ಸ್ಟ್ರೈಕರ್ ಸುನಿಲ್ ಚೆಟ್ರಿ ಬಾರಿಸಿದ ಆಕರ್ಷಕ ಗೋಲಿನ ನೆರವಿನಿಂದ ಭಾರತ ತಂಡವು 2023ನೇ ಸಾಲಿನ ಇಂಟರ್ಕಾಂಟಿನೆಂಟಲ್ ಟೂರ್ನಿಯಲ್ಲಿ ಫೈನಲ್ಗೇರುವಲ್ಲಿ ಯಶಸ್ವಿಯಾಗಿತ್ತು.