ಹೊಸದಿಗಂತ ಡಿಜಿಟಲ್ ಡೆಸ್ಕ್:
ನೂತನ ಸರ್ಕಾರ ರಚನೆ ನಂತರ ಇದೀಗ ಬಜೆಟ್ ಮಂಡನೆಗೆ ಎಲ್ಲ ಸಿದ್ಧತೆಗಳು ನಡೆಯುತ್ತಿದೆ, ಜುಲೈ 7 ಕ್ಕೆ ಬಜೆಟ್ ಮಂಡನೆಯಾಗಲಿದ್ದು, ಇಂದು ಇಲಾಖಾವಾರು ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಪೂರ್ವಭಾವಿ ಸಭೆ ನಡೆಸಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಯಿಂದಲೇ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ಆರಂಭವಾಗಲಿದ್ದು, ಹಣಕಾಸು ಸಚಿವರಾದ ಸಿಎಂ ಸಿದ್ದರಾಮಯ್ಯ ಅವರೇ ಬಜೆಟ್ ಮಂಡನೆ ಮಾಡಲಿದ್ದಾರೆ.
ರಾಜ್ಯದಲ್ಲಿ ಹಣಕಾಸಿನ ಬಗೆಗೆ ಸಾಕಷ್ಟು ಚರ್ಚೆ ಆರಂಭವಾಗಿದೆ. ರಾಜ್ಯದಲ್ಲಿ ಮನೆ ಮನೆಗೂ ಉಚಿತ ವಿದ್ಯುತ್ ಎಂದು ಹೇಳಿಯಾಗಿದೆ, ಅಂತೆಯೇ ಸರ್ಕಾರ ನಡೆದುಕೊಂಡಿದೆ. ಆದರೆ ಈ ಕೈಯಿಂದ ಕೊಟ್ಟು ಆ ಕಡೆಯಿಂದ ಕಿತ್ತುಕೊಳ್ಳುವಂತೆ ವಿದ್ಯುತ್ ದರ ಏರಿಕೆ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.
ವಿದ್ಯುತ್ ಏರಿಕೆಯಿಂದ ಈಗಾಗಲೇ ಜನ ಹೈರಾಣಾಗಿದ್ದಾರೆ. ಕರೆಂಟ್ ಬಿಲ್ ಏಕಾಏಕಿ ಏರಿಕೆಯಾಗಿ ದುಪ್ಪಟ್ಟು ಬಿಲ್ ಬಂದಿದ್ದು, ಜನತೆ ಶಾಕ್ ಆಗಿದ್ದಾರೆ. ಮಹಿಳೆಯರ ಉಚಿತ ಪ್ರಯಾಣ ಈಗಾಗಲೇ ಆರಂಭವಾಗಿದ್ದು, ವೆಚ್ಚದ ಬಗ್ಗೆ ಮಾತುಕತೆ ಆರಂಭವಾಗಿದೆ. ಒಟ್ಟಾರೆ ಸಿಎಂ ಸಿದ್ದರಾಮಯ್ಯ ಬಜೆಟ್ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಬಜೆಟ್ ಮಂಡನೆಯಾಗಲಿದೆ.