ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಪರ್‌ಜೊಯ್ ಚಂಡಮಾರುತ ನಾಳೆ ಗುಜರಾತ್‌ಗೆ ಅಪ್ಪಳಿಸಲಿದ್ದು, ಕಛ್ ಜಿಲ್ಲೆಯ ಕರಾವಳಿ ಗ್ರಾಮಗಳಿಗೆ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ.
ಹೀಗಾಗಿ ಕರಾವಳಿ ಗ್ರಾಮಗಳಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಆದರೆ ಅನೇಕರು ತಮ್ಮ ಗ್ರಾಮಗಳನ್ನು ತೊರೆಯಲು ಒಪ್ಪದೇ ಇರುವುದು ಪೊಲೀಸರಿಗೆ ತಲೆನೋವಾಗಿದೆ. ಸಾಕಷ್ಟು ಜಾನುವಾರುಗಳಿವೆ, ಅವುಗಳನ್ನು ಇಲ್ಲಿಯೇ ಬಿಟ್ಟು ಬರಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಚಂಡಮಾರುತದ ಪ್ರಭಾವವನ್ನು ತಪ್ಪಿಸಲು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆಹಾರ ಹಾಗೂ ಇತರ ಮೂಲಭೂತ ವಸ್ತುಗಳನ್ನು ಒದಗಿಸುವ ಕಾರ್ಯ ನಡೆಯುತ್ತಿದೆ.
ಆದರೆ ಸಾಕಷ್ಟು ಮಂದಿ ತಮ್ಮ ಗ್ರಾಮಗಳನ್ನು ತೊರೆಯಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ಜೀವನಕ್ಕೆ ಆಧಾರವಾಗಿರುವ ಜಾನುವಾರುಗಳನ್ನು ಬಿಟ್ಟು ಬರಲು ಆಗುವುದಿಲ್ಲ, ಮಹಿಳೆಯರು ಮತ್ತು ಮಕ್ಕಳನ್ನು ಬೇಕಾದರೆ ಕಳಿಸುತ್ತೇವೆ ಎನ್ನುವ ಅಭಿಪ್ರಾಯಗಳನ್ನು ಸ್ಥಳೀಯರು ವ್ಯಕ್ತಪಡಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.