ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಪರ್ಜಾಯ್ ಚಂಡಮಾರುತ ಗುರುವಾರ ಬೆಳಗ್ಗೆ ಪಾಕಿಸ್ತಾನದ ಕರಾವಳಿಗೆ ಅಪ್ಪಳಿಸಿದೆ. ಸಿಂಧ್ನ ಕೇತಿ ಬಂದರ್ಗೆ ಸೈಕ್ಲೋನ್ ಅಪ್ಪಳಿಸಿದೆ ಎಂದು ಪಾಕಿಸ್ತಾನದ ಹವಾಮಾನ ಮತ್ತು ಇಂಧನ ಸಚಿವ ಶೆರ್ರಿ ರೆಹಮಾನ್ ಹೇಳಿದ್ದಾರೆ. ಚಂಡಮಾರುತದ ನಂತರ ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ರಕ್ಷಣಾ ಏಜೆನ್ಸಿಗಳನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಂಡಮಾರುತದಿಂದ ಥಟ್ಟಾ, ಸುಜಾವಲ್, ಬದಿನ್ ಮತ್ತು ಥಾರ್ಪಾರ್ಕರ್ ಜಿಲ್ಲೆಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಪಾಕಿಸ್ತಾನದ ಹವಾಮಾನ ಸಚಿವರು ತಿಳಿಸಿದ್ದಾರೆ.
ಚಂಡಮಾರುತದಿಂದಾಗಿ ಪಾಕಿಸ್ತಾನಕ್ಕೆ ಸಣ್ಣ ವಿಮಾನಗಳ ಆಗಮನವನ್ನು ನಿಲ್ಲಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದ್ದು, ಗಂಟೆಗೆ 140 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ವಿವರಿಸಿದರು.