ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಪರ್‌ಜೊಯ್ ಚಂಡಮಾರುತ ಇಂದು ಅಪ್ಪಳಿಸಲಿದ್ದು, ಗುಜರಾತ್‌ನ ಕಚ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಕ್ಕೂರ್ ಬಂದರಿನಲ್ಲಿ ಬಿಪರ್ ಜೊಯ್ ನೆಲೆಯಾಗಲಿದ್ದು, ಈಗಾಗಲೇ 75 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ.
ಇಂದು ಬೆಳಗ್ಗೆಯೇ ಗುಜರಾತ್‌ನ ಮಾಂಡ್ವಿಯಲ್ಲಿ ಬಲವಾದ ಗಾಳಿ ಬೀಸಿದೆ. ಅಲೆಗಳ ಏರಿಳಿತವೂ ಜೋರಾಗಿದೆ. ಇಂದು ಸಂಜೆವೇಳೆಗೆ ಅತ್ಯಂತ ತೀವ್ರತರವಾದ ಚಂಡಮಾರುತ ಬೀಸಲಿದೆ. ಈ ಹಿನ್ನೆಲೆಯಲ್ಲಿ ಗುಜರಾತ್‌ನ ದ್ವಾರಕಾ ಜಿಲ್ಲೆಯ ಶಾಲೆ ಕಾಲೇಜುಗಳು ಹಾಗೂ ಧಾರ್ಮಿಕ ಕೇಂದ್ರಗಳನ್ನು ಮುಚ್ಚಲಾಗಿದೆ. ದ್ವಾರಕಾದಲ್ಲಿ ಸಂಜೆ ವೇಳೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಸೆಕ್ಷನ್ 144 ಜಾರಿ ಮಾಡಲಾಗಿದೆ.