ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಡು ಪ್ರಾಣಿಗಳ ವೈಲ್ಡ್ ಶಾಟ್ಸ್ ನೋಡಿದಾಕ್ಷಣ ಮೈ ಜುಂ ಎನಿಸುತ್ತದೆ, ಪ್ರಾಣಿಗಳನ್ನು ಇಷ್ಟು ಸೂಕ್ಷ್ಮವಾಗಿ ಗಮನಿಸಿ, ಫೋಟೊಗ್ರಾಫರ್ ಎಷ್ಟು ತಾಳ್ಮೆ ಹಾಗೂ ಜಾಗರೂಕತೆಯಿಂದ ಫೋಟೊ ತೆಗೆದಿರಬಹುದು ಎಂದು ಅನಿಸೋದು ನಿಜ.
ಆದರೆ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಬೋನ್ನಲ್ಲಿ ಸಿಂಹದ ಹಿಡಿತಕ್ಕೆ ಸಿಕ್ಕ ಫೋಟೊಗ್ರಾಫರ್ ಮೈಯೆಲ್ಲಾ ರಕ್ತವಾಗಿದೆ. ಇಡೀ ದೇಹ ಹೊರಗೆ ಬಂದರೂ ಕಾಲು ಮಾತ್ರ ಸಿಂಹದ ಕೈಗೆ ಸಿಕ್ಕಿದ್ದು, ಸಿಂಹ ಕೂಡ ಫೋಟೊಗ್ರಾಫರ್ ಕೊಂದು ಹಾಕೋಕೆ ಪಣ ತೊಟ್ಟಂತೆ ಕಾಣಿಸುತ್ತದೆ. ಸ್ಥಳೀಯರು ಸಿಂಹದ ಕೈಗೆ ಕೋಲುಗಳಿಂದ ತಿವಿದು ಫೋಟೊಗ್ರಾಫರ್ ಕಾಲನ್ನು ರಕ್ಷಿಸಲು ಪ್ರಯತ್ನಪಡುತ್ತಿದ್ದಾರೆ.
ಎರಡು ಫೋಟೊ ತೆಗೆದ ನಂತರ ಈ ರೀತಿ ಅನಾಹುತ ಸಂಭವಿಸಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕಾಡು ಪ್ರಾಣಿಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಡಬೇಕು, ಸ್ವಲ್ಪ ಎಡವಟ್ಟಾದ್ರೂ ಪ್ರಾಣವೇ ಹೋಗಿಬಿಡುತ್ತದೆ.
https://twitter.com/cctvidiots/status/1669153945334296577?s=20