ಅಡುಗೆ ಎಣ್ಣೆಯ ಮೇಲಿನ ಆಮದು ಸುಂಕ ಕಡಿತಕ್ಕೆ ಮುಂದಾದ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರವು ಅಡುಗೆ ಎಣ್ಣೆಯ ಮೇಲಿನ ಆಮದು ಸುಂಕನ್ನು ಕಡಿತಗೊಳಿಸಿದ್ದು, ಈ ಮೂಲಕ ಖಾದ್ಯ ತೈಲದ ಬೆಲೆಯನ್ನು ನಿಯಂತ್ರಣದಲ್ಲಿಡಲು ಮುಂದಾಗಿದೆ.

ಭಾರತವು ಸಂಸ್ಕರಿಸಿದ ಸೋಯಾಯಿಲ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇಕಡಾ 17.5ರಿಂದ ಶೇಕಡಾ 12.5ಕ್ಕೆ ಇಳಿಸಿದೆ.ಈ ಕ್ರಮವು ಖಾದ್ಯ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಕಚ್ಚಾ ಮತ್ತು ಸಂಸ್ಕರಿಸಿದ ತೈಲಗಳ ಆಮದುಗಳ ನಡುವೆ ಸಮತೋಲನವನ್ನು ಸಾಧಿಸಲು ಸಹಾಯಕವಾಗಿದೆ.

ಅರ್ಜೆಂಟೀನಾ, ಬ್ರೆಜಿಲ್, ಉಕ್ರೇನ್ ಮತ್ತು ರಷ್ಯಾದಿಂದ ಈ ಎರಡು ರೀತಿಯ ಎಣ್ಣೆಯನ್ನು ಕೇಂದ್ರವು ಆಮದು ಮಾಡಿಕೊಳ್ಳುತ್ತದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಚ್ಚಾ ಪಾಮ್ ಎಣ್ಣೆ, ಕಚ್ಚಾ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಗಳು ಗಣನೀಯ ಇಳಿಕೆ ಕಂಡಿವೆ.

ಈ ಹಿನ್ನೆಲೆ ಈ ತಿಂಗಳ ಮೊದಲನೇ ವಾರದಲ್ಲಿ ಕೇಂದ್ರವು ಖಾದ್ಯ ತೈಲ ಕಂಪನಿಗಳ ಸಭೆಯನ್ನು ಕರೆದು, ಜಾಗತಿಕ ಮಾರುಕಟ್ಟೆಗನುಗುಣವಾಗಿ ಅಡುಗೆ ಎಣ್ಣೆಯ ಎಂಆರ್‌ಪಿ ದರವನ್ನು ಪ್ರತಿ ಲೀಟರ್‌ಗೆ 8 ರಿಂದ 12 ರೂ. ಕಡಿಮೆಗೊಳಿಸುವಂತೆ ಉದ್ಯಮಗಳಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ದಿನಮಾನಗಳಲ್ಲಿ ಎಂಆರ್​ಪಿ ದರವು ಕಡಿಮೆಯಾಗುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!