ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಈಗಾಗಲೇ ಅನೇಕ ಉದ್ಯಮಗಳು ವ್ಯಾಪಾರ ವಹಿವಾಟು ಬಂದ್ ಮಾಡಿದ್ದೂ, ಇದೀಗ ಜಾಗತಿಕ ಇಂಧನ ದೈತ್ಯ ಶೆಲ್ ಪೆಟ್ರೋಲಿಯಂ ಕೂಡ ತನ್ನ ಷೇರುಗಳನ್ನು ಮಾರಾಟ ಮಾಡಿ ಪಾಕಿಸ್ತಾನಿ ಮಾರುಕಟ್ಟೆಯಿಂದ ನಿರ್ಗಮಿಸಲು ನಿರ್ಧರಿಸಿದೆ.
ಶೆಲ್ ಪೆಟ್ರೋಲಿಯಂ ಕಂಪನಿ ಲಿಮಿಟೆಡ್(SPCO) SPL ನ ನಿರ್ದೇಶಕರ ಮಂಡಳಿ ಸಭೆಯಲ್ಲಿ ಶೆಲ್ ಪಾಕಿಸ್ತಾನ್ ಲಿಮಿಟೆಡ್ (SPL) ನಲ್ಲಿ ತನ್ನ ಪಾಲನ್ನು ಮಾರಾಟ ಮಾಡುವ ಉದ್ದೇಶವನ್ನು ಪ್ರಕಟಿಸಿದೆ.
ಶೆಲ್ ಪಾಕಿಸ್ತಾನ್ ಲಿಮಿಟೆಡ್ (SPL) ಯುನೈಟೆಡ್ ಕಿಂಗ್ಡಂನ ಶೆಲ್ ಪೆಟ್ರೋಲಿಯಂ ಕಂಪನಿ ಲಿಮಿಟೆಡ್ನ ಅಂಗಸಂಸ್ಥೆಯಾಗಿದ್ದು, SPCL ರಾಯಲ್ ಡಚ್ ಶೆಲ್ Plc ನ ಅಂಗಸಂಸ್ಥೆಯಾಗಿದೆ
ಶೆಲ್ ಅಂತಾರಾಷ್ಟ್ರೀಯ ಖರೀದಿದಾರರಿಂದ ಬಲವಾದ ಆಸಕ್ತಿಯನ್ನು ನೋಡುತ್ತಿದೆ ಎಂದು ಶೆಲ್ ಪಾಕಿಸ್ತಾನದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶೆಲ್ ಪಾಕಿಸ್ತಾನ್ ವಕ್ತಾರರ ಪ್ರಕಾರ, ಜಾಗತಿಕ ಪೆಟ್ರೋಲಿಯಂ ದೈತ್ಯ ಷೇರುಗಳ ಮಾರಾಟದ ಘೋಷಣೆಯು ಕಂಪನಿಯ ವ್ಯವಹಾರ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.
ಪಾಕಿಸ್ತಾನ್ ಸ್ಟಾಕ್ ಎಕ್ಸ್ಚೇಂಜ್ (ಪಿಎಸ್ಎಕ್ಸ್) ಗೆ ಕಳುಹಿಸಲಾದ ನೋಟಿಸ್ನಲ್ಲಿ, ಶೆಲ್ ಪಾಕಿಸ್ತಾನ್ ಲಿಮಿಟೆಡ್ (ಎಸ್ಪಿಎಲ್) ನ ನಿರ್ದೇಶಕರ ಮಂಡಳಿಯು 2023ರ ಜೂನ್ 14ರಂದು ನಡೆದ ಮಂಡಳಿಯ ಸಭೆಯಲ್ಲಿ ಶೆಲ್ ಪೆಟ್ರೋಲಿಯಂ ನಿರ್ಧಾರವನ್ನು ಅನುಮೋದಿಸಿದೆ.
ಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪಾಕಿಸ್ತಾನಿ ರೂಪಾಯಿ (PKR) 2 ಬಿಲಿಯನ್ ತೆರಿಗೆಯ ನಂತರದ ಲಾಭವನ್ನು ಪೋಸ್ಟ್ ಮಾಡಿದೆ. ಕಂಪನಿಯು 4.6 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳ ನಷ್ಟವನ್ನು ಅನುಭವಿಸಿತು. ಪಾಕಿಸ್ತಾನಿ ರೂಪಾಯಿಯ ಅಭೂತಪೂರ್ವ ಅಪಮೌಲ್ಯ, ಏರುತ್ತಿರುವ ಹಣದುಬ್ಬರ ಮತ್ತು ಸ್ಥೂಲ ಆರ್ಥಿಕ ಅನಿಶ್ಚಿತತೆಯ ನಡುವೆ ಈ ನಷ್ಟ ಸಂಭವಿಸಿದೆ.