ಅಮೆರಿಕದಿಂದ ಸಶಸ್ತ್ರ ಡ್ರೋನ್ ಗಳ ಖರೀದಿಗೆ ರಕ್ಷಣಾ ಸಚಿವಾಲಯ ಸಮ್ಮತಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದಿಂದ ಯುಎಸ್ ನಿರ್ಮಿತ ಸಶಸ್ತ್ರ MQ-9B ಸೀಗಾರ್ಡಿಯನ್ ಡ್ರೋನ್‌ಗಳ (MQ-9B SeaGuardian drones) ಖರೀದಿಗೆ ಭಾರತೀಯ ರಕ್ಷಣಾ ಸಚಿವಾಲಯ (Defence Ministry )ಅನುಮೋದನೆ ನೀಡಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

3 ಬಿಲಿಯನ್ ಡಾಲರ್‌ಗಳಷ್ಟು ಮೌಲ್ಯದ ಜನರಲ್ ಅಟಾಮಿಕ್ಸ್ ತಯಾರಿಸಿದ 31 ಡ್ರೋನ್‌ಗಳನ್ನು ಭಾರತ ಖರೀದಿಸಲಿದೆ ಎಂದು ಸುದ್ದಿ ಮೂಲ ತಿಳಿಸಿದೆ.

ಇತ್ತ ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಪ್ರವಾಸ ಮಾಡಲಿದ್ದು, ಈ ಕ್ಷಣ ಮೊದಲು ಡ್ರೋನ್‌ಗಳ ಖರೀದಿಗೆ ರಕ್ಷಣಾ ಸಚಿವಾಲಯದ ಆರಂಭಿಕ ಅನುಮತಿ ಸಿಕ್ಕಿದೆ.

ರಕ್ಷಣಾ ಸಚಿವಾಲಯದ ಉನ್ನತ ಸಂಸ್ಥೆ ಒಪ್ಪಂದವನ್ನು ಅನುಮೋದಿಸಲು ಸಭೆ ನಡೆಸಿತು.ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಪ್ರಧಾನಿ ಮೋದಿ ಭೇಟಿಯ ಕ್ಷಣ ಈ ಕುರಿತು ಘೋಷಿಸುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!