ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ (Gujrat) ನ ಕಛ್ ಪ್ರಾಂತ್ಯ (Kutch) ದ ಕೋಟ್ ಲಖಪತ್ ಬಳಿ ಬಿಪರ್‌ಜಾಯ್ ಚಂಡಮಾರುತ ಅಪ್ಪಳಿಸಿದ್ದು, ಗುಜರಾತ್ ತೀರ ಪ್ರದೇಶದಲ್ಲಿ ಭೀಕರ ಬಿರುಗಾಳಿ ಬೀಸುತ್ತಿದೆ.
ಸದ್ಯ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ತೀರ ದಾಟುವ ಹೊತ್ತಿಗೆ ಈ ಗಾಳಿಯ ವೇಗ 120ರಿಂದ 130 ಕಿಲೋಮೀಟರ್ ಗೆ ಹೆಚ್ಚಾಗಬಹುದು. ಜನತೆ ಎಚ್ಚರಿಂದ ಇರಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಇತ್ತ ಇದರ ನಡುವೆ ಗುಜರಾತ್‌ನಲ್ಲಿ (Gujarat) ನವಜಾತ ಹೆಣ್ಣು ಶಿಶುವಿಗೆ ಬಿಪರ್‌ಜೋಯ್ ಎಂದು ಹೆಸರಿಸಲು ನಿರ್ಧರಿಸಿದ್ದಾರೆ .
ಒಂದು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ, ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಎಂಬಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಸೈಕ್ಲೋನ್ ಹೆಸರನ್ನೇ ಈಗ ತಮ್ಮ ಮಗಳಿಗೆ ಇಟ್ಟಿದ್ದಾರೆ.
ಈ ಹಿಂದೆ ಕೊರೋನಾ ಸಮಯ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ದಂಪತಿ ತಮ್ಮ ಮಗುವಿಗೆ ‘ಕೊರೋನಾ’ ಎಂದು ಹೆಸರಿಟ್ಟಿದ್ದರು. ಅಂತೆಯೇ ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲೂ ವೈರಸ್‌ನ ಹೆಸರನ್ನು ಮಗುವೊಂದಕ್ಕೆ ಇಡಲಾಗಿತ್ತು.