ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ಬೆಳಗಿನ ವೇಳೆಗೆ ಬಿಪಾರ್‌ಜೋಯ್ ಚಂಡಮಾರುತವು ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ತೀವ್ರ ಚಂಡಮಾರುತವು ಸೌರಾಷ್ಟ್ರ-ಕಚ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ ಮತ್ತು ಈಶಾನ್ಯಕ್ಕೆ ಚಲಿಸುವ ನಿರೀಕ್ಷೆಯಿದೆ. ಚಂಡಮಾರುತದ ಪ್ರಭಾವದಿಂದ ಶುಕ್ರವಾರ ರಾಜಸ್ಥಾನ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಬಿಪರ್ಜೋಯ್ ತೀವ್ರ ಚಂಡಮಾರುತವು ಶುಕ್ರವಾರ ಮುಂಜಾನೆ 2.30 ಗಂಟೆಗೆ ನಲಿಯಾದಿಂದ ಸುಮಾರು 30 ಕಿಮೀ ಉತ್ತರಕ್ಕೆ ಸೌರಾಷ್ಟ್ರ-ಕಚ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು” ಎಂದು ಐಎಂಡಿ ಟ್ವೀಟ್‌ನಲ್ಲಿ ತಿಳಿಸಿದೆ.
ಗುಜರಾತಿನಲ್ಲಿ ವಿನಾಶದ ನಂತರ, ಬಿಪರ್ ಜಾಯ್ ಚಂಡಮಾರುತವು ರಾಜಸ್ಥಾನದ ಕಡೆಗೆ ಚಲಿಸಿತು.