ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಕಂಡುಬಂದಿದ್ದು, ಬೆಂಗಳೂರು ಟರ್ಫ್ ಕ್ಲಬ್ನ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಗತ್ತೆ ಪ್ರಾಣಿಗಳ ಚಲನವಲನಕ್ಕೆ ನಿರ್ಬಂಧ ವಿಧಿಸಲಾಗಿದೆ.
ಟರ್ಪ್ ಕ್ಲಬ್ ಸುತ್ತಮುತ್ತ ಗ್ಲಾಂಡರ್ಸ್ ರೋಗ ಪೀಡಿತ ಪ್ರದೇಶವೆಂದು ಘೋಷಿಸಿರುವ ಭಾಗದಲ್ಲಿ ಕುದುರೆ ಮತ್ತು ಕುದುರೆ ಜಾತಿಗೆ ಸೇರಿದ ಪ್ರಾಣಿಗಳ ಚಲನವಲನ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಟರ್ಫ್ ಕ್ಲಬ್ನಲ್ಲಿರುವ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ದೃಢಪಟ್ಟಿದೆ. ಪ್ರಾಣಿಗಳಲ್ಲಿ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಭಂದಕ ಮತ್ತು ನಿಯಂತ್ರಣ ಅಧಿನಿಯಮ 2009 ರ ಕಾಲಂ-6 ರಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು ಟರ್ಫ್ ಕ್ಲಬ್ ಅನ್ನು ಗ್ಲಾಂಡರ್ಸ್ ಕೇಂದ್ರೀಕೃತ ಸ್ಥಳ ಎಂದು ಗುರುತಿಸಲಾಗಿದೆ.
ಬೆಂಗಳೂರು ಟರ್ಫ್ ಕ್ಲಬ್ನ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ ಕತ್ತೆ, ಹೇಸರಗತ್ತೆ ಪ್ರಾಣಿಗಳ ಚಲನವನ ಹಾಗೂ ಪ್ರಾಣಿಗಳ ಮನೋರಂಜನೆ ಮೆರವಣೆಗೆ ಶುಭಕಾರ್ಯಗಳು ನಿರ್ಬಂಧ ವಿಧಿಸಲಾಗಿದೆ.
ಬೆಂಗಳೂರು ಟರ್ಫ್ ಕ್ಲಬ್ ಸುತ್ತ ಕುದುರೆ, ಕತ್ತೆ, ಹೇಸರಗತ್ತೆ ಚಲನವಲನಕ್ಕೆ ನಿರ್ಬಂಧ! ಯಾಕೆ ಗೊತ್ತಾ?

