ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ಗೆ ಬಿಪರ್‌ಜೊಯ್ ಚಂಡಮಾರುತ ಅಪ್ಪಳಿಸಿದ್ದು, ಜಾನುವಾರುಗಳನ್ನು ರಕ್ಷಿಸಲು ತೆರಳಿದ್ದ ಇಬ್ಬರು ಮೃತಪಟ್ಟಿದ್ದಾರೆ. ಭಾವನಗರ ಜಿಲ್ಲೆಯ ಸಿಹೋರ್ ತಾಲೂಕಿನ ಭಂಡಾರ್ ಮತ್ತು ವಡೋದರಾ ಗ್ರಾಮದ ನಡುವಿನ ದಶರಥಬಾಯಿ ಅವರ ಜಮೀನಿನಲ್ಲಿ ಹಾದು ಹೋಗುವ ಕಾಲುವೆ ಉಕ್ಕಿ ಹರಿಯುತ್ತಿತ್ತು.
ಇಲ್ಲಿ ಆಡುಗಳು ಹಾಗೂ ಕುರಿಗಳು ಸಿಲುಕಿಕೊಂಡಿದ್ದವು. ಇದನ್ನು ಕಂಡ ರಾಮ್‌ಜಿಭಾಯಿ ಹಾಗೂ ಅವರ ಪುತ್ರ ರಾಕೇಶ್‌ಭಾಯಿ ಕಾಲುವೆಗೆ ಹಾರಿದ್ದಾರೆ. ಆದರೆ ಕುರಿಗಳನ್ನು ರಕ್ಷಿಸಲು ಅವರಿಗೆ ಸಾಧ್ಯವಾಗಿಲ್ಲ. ಅಲ್ಲಿಯೇ ಆಯಾಸದಿಂದ ಮೃತಪಟ್ಟಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಕೆಲ ಸಮಯದ ನಂತರ ಸ್ಥಳೀಯರು ತಂದೆ ಮಗ ಹಾಗೂ ೨೨ ಕುರಿ, ಮೇಕೆಗಳ ಮೃತದೇಹವನ್ನು ಹೊರತೆಗೆದಿದ್ದಾರೆ.