ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಾಯಣದ ಕಥೆಯೊಂದಿಗೆ ಇಂದು ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರ ಆದಿಪುರುಷ. ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶನದ ಈ ಸಿನಿಮಾ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ಮತ್ತು ಸೈಫ್ ಅಲಿಖಾನ್ ರಾವಣಾಸುರನಾಗಿ ನಟಿಸಿದ್ದು, ಭಾರೀ ನಿರೀಕ್ಷೆಗಳ ನಡುವೆ ಇಂದು ಬಿಡುಗಡೆಯಾಗಿದೆ. ಈ ಚಿತ್ರ ಪ್ರದರ್ಶನಗೊಳ್ಳುವ ಪ್ರತಿ ಥಿಯೇಟರ್‌ನಲ್ಲಿ ಹನುಮಂತನಿಗೆ ಒಂದು ಸೀಟು ಮೀಸಲಿಟ್ಟಿದ್ದರು.
ರಾಮಾಯಣ ಪಠಿಸುವಲ್ಲೆಲ್ಲಾ ಹನುಮಂತ ಕಾಣಿಸಿಕೊಳ್ಳುತ್ತಾನೆ ಎಂಬ ನಂಬಿಕೆಯನ್ನು ಗೌರವಿಸಿ, ಪ್ರತಿ ಥಿಯೇಟರ್ ಮಾಲೀಕರು ಹನುಮಂತನಿಗೆ ಆಸನವನ್ನು ಮೀಸಲಿಟ್ಟಿದ್ದಾರೆ. ಇದೇ ವೇಳೆ ಆದಿಪುರುಷ ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಥಿಯೇಟರ್ ನಲ್ಲಿ ಕೋತಿಯೊಂದು ಕಾಣಿಸಿಕೊಂಡಿದ್ದು ವಿಶೇಷ. ಅಭಿಮಾನಿಯೊಬ್ಬರು ಆ ಕೋತಿ ಥಿಯೇಟರ್ ಕಿಟಕಿಯಿಂದ ಆದಿಪುರುಷ ಚಿತ್ರ ವೀಕ್ಷಿಸುತ್ತಿರುವ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆದಿಪುರುಷ ಚಿತ್ರತಂಡ ಕೂಡ ರಿಟ್ವೀಟ್ ಮಾಡಿದೆ. ಈಗ ಆ ವಿಡಿಯೋ ವೈರಲ್ ಆಗುತ್ತಿದೆ.
ಈ ಸಿನಿಮಾದಲ್ಲಿ ಪ್ರಭಾಸ್ ರಾಮ ಮತ್ತು ದಶರಥ.. ತಂದೆ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾದ ಹೈಲೈಟ್ಸ್ ವಿಚಾರಕ್ಕೆ ಬಂದರೆ ರಾಮ ಮತ್ತು ರಾವಣಾಸುರನ ಎಂಟ್ರಿ ಅದ್ದೂರಿಯಾಗಿದೆ. ಅದರಲ್ಲೂ ಎರಡನೇ ಭಾಗದಲ್ಲಿ ಸಾಹಸ ದೃಶ್ಯಗಳು ಎಲ್ಲರ ಮನಸೆಳೆಯುತ್ತವೆ.