ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲಬುರಗಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಟ್ರ್ಯಾಕ್ಟರ್ ಹರಿದು ಹೆಡ್‌ಕಾನ್ಸ್‌ಟೇಬಲ್ ಮೃತಪಟ್ಟಿದ್ದಾರೆ. ಅಕ್ರಮ ಮರಳುಗಾರಿಕೆ ತಡೆಯಲು ಹೋದ ಹೆಡ್‌ಕಾನ್ಸ್‌ಟೇಬಲ್ ಮಯೂರ್ ಚೌಹಾಣ್ ಕೊಲೆ ಮಾಡಲು ಟ್ರ್ಯಾಕ್ಟರ್ ಹರಿಸಿರುವ ಶಂಕೆ ಇದೀಗ ವ್ಯಕ್ತವಾಗಿದೆ. ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಭೀಮಾ ನದಿ ದಡದಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಮಾಹಿತಿ ಅನ್ವಯ ಮಯೂರ್ ಅವರು ತಪಾಸಣೆಗಾಗಿ ಹುಲ್ಲೂರ್ ಬಳಿ ಚೆಕ್ ಪೋಸ್ಟ್ ಹಾಕಿಸಿದ್ದರು. ತಪಾಸಣೆಗಾಗಿ ಟ್ರ್ಯಾಕ್ಟರ್ ನಿಲ್ಲಿಸುವಂತೆ ಮಯೂರ್ ಕೈ ಮಾಡಿದ್ದು, ಅವರ ಮೇಲೆಯೇ ಟ್ರ್ಯಾಕ್ಟರ್ ಹರಿಸಲಾಗಿದೆ. ತನಿಖೆ ನಂತರ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.