ಬೋಳಾಸ್ ಹೆಜ್ಜೆ ಗುರುತು ವಿಸ್ತರಣೆ: ಮಂಗಳೂರಿನಲ್ಲಿ ಎರಡು ನೂತನ ಮಳಿಗೆ ಲೋಕಾರ್ಪಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತದ ಮುಂಚೂಣಿ ಡ್ರೈಫ್ರೂಟ್ಸ್‌ ಮತ್ತು ನಟ್ಸ್‌ ಬ್ರ್ಯಾಂಡ್ ಆಗಿರುವ ಬೋಳಾಸ್‌ ಆಗ್ರೋ ಪ್ರೈವೇಟ್ ಲಿಮಿಟೆಡ್, ಮಂಗಳೂರಿನಲ್ಲಿ ಎರಡು ನೂತನ ಮಳಿಗೆಗಳಿಗೆ ಚಾಲನೆ ನೀಡಿದೆ.
ಚಿಲಿಂಬಿ ಮತ್ತು ರಥಬೀದಿಯಲ್ಲಿ ಈ ಎರಡು ಮಳಿಗೆಗಳು ಕಾರ್ಯಾರಂಭಗೊಳ್ಳಲಿವೆ. ಹೆಸರಾಂತ ವೈದ್ಯ ಡಾ.ದೇವದಾಸ್ ಶೆಣೈ ಇಂದು ಚಿಲಿಂಬಿಯಲ್ಲಿನ ನೂತನ ಮಳಿಗೆ ಉದ್ಘಾಟಿಸಿದ್ದಾರೆ. ಪ್ರಸ್ತುತ ಮಂಗಳೂರಿನಲ್ಲಿ 4 ರೀಟೇಲ್‌ ಮಳಿಗೆಗಳನ್ನು ಹೊಂದಿರುವ ಬೋಳಾಸ್‌, ಪ್ರೀಮಿಯಂ ಗುಣಮಟ್ಟದ ಉತ್ಪನ್ನಗಳೊಂದಿಗೆ ಗ್ರಾಹಕರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ನಗರದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ. ಈ ಮಳಿಗೆಗಳು ಗ್ರಾಹಕರಿಗೆ ಕಾರ್ಖಾನೆಯ ನೇರ ಬೆಲೆಯಲ್ಲಿ ಗುಣಮಟ್ಟದ ನಟ್ಸ್‌ಗಳನ್ನು ನೀಡಲಿದೆ. ಪಿಸ್ತಾದಿಂದ ಗೋಡಂಬಿವರೆಗೆ ಹಲವು ವಿಧದ ಡ್ರೈಫ್ರೂಟ್ಸ್‌ ಮತ್ತು ನಟ್ಸ್‌ಗಳು ಮಳಿಗೆಯಲ್ಲಿ ಲಭ್ಯವಿದೆ. ಸಿಹಿ ತಿನಿಸುಗಳು ಕೂಡ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ.

ಡ್ರೈಫ್ರೂಟ್ಸ್‌ನಲ್ಲಿದೆ ಆರೋಗ್ಯ
ಡಾ. ದೇವದಾಸ್ ಶೆಣೈ ಮಾತನಾಡಿ, ಭಾರತದ ಜನಸಂಖ್ಯೆಯ ಸರಿಸುಮಾರು 60% ರಷ್ಟು ಜನರು ಪೌಷ್ಟಿಕಾಂಶದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್‌ನಟ್‌ಗಳಂತಹ ನಟ್ಸ್‌ಗಳು ವ್ಯಾಪಕ ಶ್ರೇಣಿಯ ಪ್ರಮುಖ ಪೋಷಕಾಂಶಗಳನ್ನು ನೀಡುತ್ತವೆ. ಭಾರತದ ಸಾಮಾನ್ಯ ಜನರಿಗೆ ಅಂತಹ ಪೌಷ್ಟಿಕಾಂಶ-ದಟ್ಟವಾದ ಆಹಾರಗಳನ್ನು ಕೈಗೆಟಕುವಂತೆ ಮಾಡುವ ಬೋಳಾಸ್‌ ಅವರ ಉದ್ದೇಶಕ್ಕೆ ಬೆಂಬಲವಾಗಿ ನಾನು ಇಲ್ಲಿದ್ದೇನೆ. ಈ ಅಂಗಡಿಯ ಪ್ರಾರಂಭದೊಂದಿಗೆ, ಬೋಳಾಸ್‌ ಮುಂದಿನ ಪೀಳಿಗೆಗೆ ಆರೋಗ್ಯಕರ ಭವಿಷ್ಯಕ್ಕಾಗಿ ದಾರಿ ಮಾಡಿಕೊಡುತ್ತಿದೆ ಎಂದಿದ್ದಾರೆ.

ಆಗ್ರೋ ಫಾರ್ಮ್-ಟು-ಫೋರ್ಕ್ ನೆಟ್‌ವರ್ಕ್
ಬೋಳಾಸ್‌ ಆಗ್ರೋ ಪ್ರೈ.ಲಿ.ನ ನಿರ್ದೇಶಕ ಬೋಲಾ ರಾಹುಲ್ ಮಾತನಾಡಿ  ಭಾರತದಲ್ಲಿ ಡ್ರೈಫ್ರೂಟ್ಸ್‌ ಮತ್ತು ನಟ್ಸ್‌ ಬೇಡಿಕೆಯು ಗಮನಾರ್ಹ ಬೆಳವಣಿಗೆ ಕಂಡಿದೆ. ಅವುಗಳ ಆರೋಗ್ಯ ಮತ್ತು ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿದೆ. ಆದಾಗ್ಯೂ, ನಟ್ಸ್‌ಗಳು ದುಬಾರಿಯಾಗಿದೆ ಎಂಬ ಭಾವನೆಯಿದೆ. ಪೂರೈಕೆ ಜಾಲಗಳ ಅಸಮರ್ಥತೆ ಇದಕ್ಕೆ ಕಾರಣ. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಬೋಳಾಸ್‌ ಆಗ್ರೋ ಫಾರ್ಮ್-ಟು-ಫೋರ್ಕ್ ನೆಟ್‌ವರ್ಕ್ ಅನ್ನು ನಿರ್ಮಿಸುತ್ತಿದೆ. ಈ ಹೆಜ್ಜೆಯ ಮೂಲಕ, ಕಂಪನಿಯು ಗ್ರಾಹಕರಿಗೆ ಗರಿಷ್ಠ ಚಿಲ್ಲರೆ ಬೆಲೆ(ಎಂಆರ್‌ಪಿ)ಗಿಂತ 40% ವರೆಗೆ ಅಗ್ಗದ ದರದಲ್ಲಿ ಬಹುತೇಕ ಕಾರ್ಖಾನೆಗಳ ದರದಲ್ಲಿಯೇ ಉತ್ಪನ್ನ ಒದಗಿಸಲಿದೆ ಎಂದರು.

ಬೆಂಗಳೂರಿನಲ್ಲೂ ಬೋಳಾಸ್
ಬೋಳಾಸ್‌ ಆಗ್ರೋ ಪ್ರೈ.ಲಿ.ನ ನಿರ್ದೇಶಕ ಬೋಲಾ ರಜತ್ ಮಾತನಾಡಿ, ನಮ್ಮ ಪ್ರಾಥಮಿಕ ಗಮನವು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪೌಷ್ಟಿಕಾಂಶವನ್ನು ಕೈಗೆಟುಕುವ ದರದಲ್ಲಿ ನೀಡುವುದು. ಪ್ರತಿಯೊಂದು ಉತ್ಪನ್ನವು ಅದರ ತಾಜಾತನ ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿಖರವಾಗಿ ಪ್ಯಾಕ್ ಮಾಡಲ್ಪಟ್ಟಿದೆ. ನಾವು ಜುಲೈ ಮೊದಲ ವಾರದಲ್ಲಿ ಬೆಂಗಳೂರು ಸೇರಿದಂತೆ ಹಲವೆಡೆ ಮಳಿಗೆ ವಿಸ್ತರಿಸುತ್ತಿದ್ದೇವೆ ಎಂದರು.

ಏನೆಲ್ಲಾ ಸಿಗಲಿದೆ?
ಬೋಳಾಸ್‌ ಆಗ್ರೋ ತನ್ನ ಮಳಿಗೆಗಳಲ್ಲಿ ನಟ್ಸ್‌ಗಳು, ಒಣ ಹಣ್ಣುಗಳು, ಖರ್ಜೂರ, ಒಣಗಿದ ಬೆರ್ರಿಗಳು, ಜೇನುತುಪ್ಪ, ಕೇಸರಿ, ಕೋಲ್ಡ್‌ ಪ್ರೆಸ್‌ ಮತ್ತು ಸಂಸ್ಕರಿಸಿದ ಎಣ್ಣೆಗಳು ಮತ್ತು ಸಿಹಿತಿಂಡಿಗಳನ್ನು ಹೊಂದಿದೆ. ಮಂಗಳೂರಿನಲ್ಲಿ ಯೆಯ್ಯಾಡಿ, ಬೈಕಂಪಾಡಿ, ಬಿಜೈ ಮತ್ತು ಪಾಂಡೇಶ್ವರ ಪ್ರದೇಶಗಳಲ್ಲಿ ಮಳಿಗೆಗಳನ್ನು ಹೊಂದಿದ್ದು, ಮುಖ್ಯವಾಗಿ ಕರ್ನಾಟಕದಲ್ಲಿ 49 ಮಳಿಗೆಗಳನ್ನು ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!